ADVERTISEMENT

ಶಿರಸಿ: ಮೃತ ಮಹಿಳೆ ಕುಟುಂಬಕ್ಕೆ16 ಗಂಟೆಯೊಳಗೆ ₹5 ಲಕ್ಷ ಪರಿಹಾರ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 7:22 IST
Last Updated 14 ಜುಲೈ 2021, 7:22 IST
ಬಂಗಾರ್ಯ ಗೌಡ ಕುಟುಂಬಕ್ಕೆ ಸಚಿವ ಶಿವರಾಮ ಹೆಬ್ಬಾರ್‌  ₹5 ಲಕ್ಷ ಮೊತ್ತದ ಪರಿಹಾರಧನದ ಚೆಕ್ ವಿತರಣೆ
ಬಂಗಾರ್ಯ ಗೌಡ ಕುಟುಂಬಕ್ಕೆ ಸಚಿವ ಶಿವರಾಮ ಹೆಬ್ಬಾರ್‌ ₹5 ಲಕ್ಷ ಮೊತ್ತದ ಪರಿಹಾರಧನದ ಚೆಕ್ ವಿತರಣೆ   

ಶಿರಸಿ: ಮಳೆಯಿಂದ ಮನೆ ಕುಸಿದು ಮೃತಪಟ್ಟಿದ್ದ ತಾಲ್ಲೂಕಿನ ಗುಡ್ನಾಪುರ ಗ್ರಾಮ ಪಂಚಾಯ್ತಿಯ ಮುಂಡಿಗೆಹಳ್ಳಿಯ ಬಂಗಾರ್ಯ ಗೌಡ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಬುಧವಾರ ₹5 ಲಕ್ಷ ಮೊತ್ತದ ಪರಿಹಾರಧನದ ಚೆಕ್ ವಿತರಿಸಿದರು.

ಬಂಗಾರ್ಯ ಪುತ್ರಿ ಯಶೋದಾ ಗೌಡ ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಮನೆ ಕುಸಿತದ ಅವಘಡದಲ್ಲಿ ಮೃತಪಟ್ಟಿದ್ದರು. ಘಟನೆ ನಡೆದ ಕೆಲ ಹೊತ್ತಲ್ಲೇ ಮೃತರ ಮನೆಗೆ ತೆರಳಿದ್ದ ಸಚಿವ ಶಿವರಾಮ ಹೆಬ್ಬಾರ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು.

ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಕುಟುಂಬಕ್ಕೆ ತ್ವರಿತವಾಗಿ ಪರಿಹಾರ ಸಿಗಲು ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು. ಸಚಿವರ ಸೂಚನೆ ಪಾಲಿಸಿದ ಅಧಿಕಾರಿಗಳು ಪರಿಹಾರಧನದ ಚೆಕ್ ಸಿದ್ಧಪಡಿಸಿದ್ದು, ಬುಧವಾರ ಬೆಳಿಗ್ಗೆ 9.30ರ ವೇಳೆಗೆ ಸಚಿವರು ಮೃತರ ತಂದೆಗೆ ಚೆಕ್ ನೀಡಿದರು. ಈ ವೇಳೆ ಸ್ಥಳೀಯ ಮುಖಂಡರು, ಅಧಿಕಾರಿಗಳು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.