ADVERTISEMENT

ಶಿರಸಿ–ಕುಮಟಾ ಹೆದ್ದಾರಿ: ಅಕ್ಟೋಬರನಿಂದ ಸಂಚಾರ ನಿಷೇಧ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 15:29 IST
Last Updated 25 ಜೂನ್ 2024, 15:29 IST
<div class="paragraphs"><p>ಕುಮಟಾ–ಶಿರಸಿ ರಾಷ್ಟ್ರೀಯ ಹೆದ್ದಾರಿ </p></div>

ಕುಮಟಾ–ಶಿರಸಿ ರಾಷ್ಟ್ರೀಯ ಹೆದ್ದಾರಿ

   

ಕಾರವಾರ: ಕಾಮಗಾರಿ ಪ್ರಗತಿಯಲ್ಲಿರುವ ಶಿರಸಿ–ಕುಮಟಾ ರಾಷ್ಟ್ರೀಯ ಹೆದ್ದಾರಿ 766–ಇ ನಲ್ಲಿ ಅಕ್ಟೋಬರ್ 15 ರಿಂದ 2025ರ ಫೆ.25ರ ವರೆಗೆ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮಂಗಳವಾರ ಆದೇಶಿಸಿದ್ದಾರೆ.

ಹೆದ್ದಾರಿ ಕಾಮಗಾರಿ ಸಲುವಾಗಿ ಹಾಗೂ ಉದ್ದೇಶಿತ ಮಾರ್ಗದಲ್ಲಿ ಸೇತುವೆ ಕಾಮಗಾರಿಗಳನ್ನು ಸುಗಮವಾಗಿ ನಡೆಸುವ ದೃಷ್ಟಿಯಿಂದ ವಾಹನಗಳ ಸಂಚಾರ ನಿಷೇಧಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಿದ್ದರು. ಈ ಪ್ರಸ್ತಾವ ಆಧರಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ADVERTISEMENT

‘ಶಿರಸಿ–ಸಿದ್ದಾಪುರ–ಕುಮಟಾ ಮಾರ್ಗವಾಗಿ ಲಘು ವಾಹನಗಳು ಸಂಚರಿಸಬಹುದು. ಭಾರಿ ವಾಹನಗಳು ಶಿರಸಿ–ಯಲ್ಲಾಪುರ–ಅಂಕೋಲಾ ರಾಷ್ಟ್ರೀಯ ಹೆದ್ದಾರಿ–63 ಮತ್ತು ರಾಜ್ಯ ಹೆದ್ದಾರಿ–93 ಮಾರ್ಗವಾಗಿ ಸಾಗಬಹುದು. ಮಂಗಳೂರು–ಹೊನ್ನಾವರ–ಮಾವಿನಗುಂಡಿ–ಸಿದ್ದಾಪುರ ಮಾರ್ಗವಾಗಿಯೂ ಎಲ್ಲ ವಿಧದ ವಾಹನಗಳು ಶಿರಸಿಗೆ ಸಂಚರಿಸಬಹುದು’ ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.