ADVERTISEMENT

ಜನಾಂಗೀಯ ಅಧ್ಯಯನಕ್ಕೆ ಒತ್ತು ನೀಡಿ: ಶಾಸಕ ಭೀಮಣ್ಣ ನಾಯ್ಕ

​ಪ್ರಜಾವಾಣಿ ವಾರ್ತೆ
Published 19 ಜೂನ್ 2023, 13:53 IST
Last Updated 19 ಜೂನ್ 2023, 13:53 IST
ಶಿರಸಿಯಲ್ಲಿ ಸ್ಕೊಡ್ ವೆಸ್ ಸಂಸ್ಥೆ ವತಿಯಿಂದ ಶಾಸಕ ಭೀಮಣ್ಣ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಹಿ.ಚಿ. ಬೋರಲಿಂಗಯ್ಯ, ವೆಂಕಟೇಶ ನಾಯ್ಕ, ಸರಸ್ವತಿ ರವಿ, ರಿಯಾಜ್ ಸಾಗರ, ಆರ್.ವಾಸುದೇವ ಇದ್ದಾರೆ
ಶಿರಸಿಯಲ್ಲಿ ಸ್ಕೊಡ್ ವೆಸ್ ಸಂಸ್ಥೆ ವತಿಯಿಂದ ಶಾಸಕ ಭೀಮಣ್ಣ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಹಿ.ಚಿ. ಬೋರಲಿಂಗಯ್ಯ, ವೆಂಕಟೇಶ ನಾಯ್ಕ, ಸರಸ್ವತಿ ರವಿ, ರಿಯಾಜ್ ಸಾಗರ, ಆರ್.ವಾಸುದೇವ ಇದ್ದಾರೆ   

ಶಿರಸಿ: ಜನಾಂಗೀಯ ಅಧ್ಯಯನದ ಕೊರತೆ ಹಾಗೂ ಅಗತ್ಯ ಪುರಾವೆ ಒದಗಿಸಲು ಸಾಧ್ಯವಾಗದ ಜಿಲ್ಲೆಯ ಹಲವಾರು ಸಮುದಾಯಗಳು ಈವರೆಗೂ ಬುಡಕಟ್ಟು ವರ್ಗಕ್ಕೆ ಸೇರಲು ಸಾಧ್ಯವಾಗಿಲ್ಲ ಎಂದು ಶಾಸಕ ಭೀಮಣ್ಣ ನಾಯ್ಕ ವಿಷಾದ ವ್ಯಕ್ತಪಡಿಸಿದರು.

ಸ್ಕೊಡ್‌ವೆಸ್ ಸಂಸ್ಥೆಯು ಸುಪ್ರಿಯಾ ಇಂಟರ್‌ನ್ಯಾಷನಲ್‌ನ ಸಭಾಂಗಣದಲ್ಲಿ ಆಯೋಜಿಸಿದ್ದ 2022-23ನೇ ಸಾಲಿನ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಿಶ್ವವಿದ್ಯಾಲಯಗಳು ಸಮುದಾಯ ಆಧಾರಿತ ಅಧ್ಯಯನಗಳ ವರದಿಗಳನ್ನು ಆಯಾ ಸಮುದಾಯಗಳಿಗೆ ಹಾಗೂ ಸರ್ಕಾರಕ್ಕೆ ಸಲ್ಲಿಸಿ ಸಾಮಾಜಿಕ ನ್ಯಾಯ ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು.

ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ, ಉತ್ತರ ಕನ್ನಡ ಜಿಲ್ಲೆ ಎದುರಿಸುತ್ತಿರುವ ಸಾಂಸ್ಕೃತಿಕ, ಪಾರಂಪರಿಕ, ಪ್ರಾಕೃತಿಕ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ವಿಶ್ಲೇಷಿಸಿ ಕ್ಷೇತ್ರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಶಾಸಕರಲ್ಲಿ ವಿನಂತಿಸಿದರು.

ADVERTISEMENT

ಸಭೆಯಲ್ಲಿ ಸ್ಕೊಡ್‌ವೆಸ್‌ನ ಉಪಾಧ್ಯಕ್ಷ ಕೆ.ವಿ.ಖೂರ್ಸೆ, ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಎ.ಎಸ್. ಪ್ರಭಾಕರ, ಅರಣ್ಯ ಕಾಲೇಜಿನ ಡೀನ್ ಆರ್. ವಾಸುದೇವ, ಸಂಸ್ಥೆಯ ಕಾರ್ಯದರ್ಶಿ ಸರಸ್ವತಿ ಎನ್. ರವಿ, ನಿರ್ದೇಶಕರಾದ ವಸಂತ ಹಾದಿಮನೆ, ದಯಾನಂದ ಅಗಾಸೆ, ನಿರ್ದೇಶಕ ಶ್ರೀನಿವಾಸ ಮೂರ್ತಿ, ಹೆಚ್.ಜಿ.ಲತಾ, ಲಲಿತಾ ಹೆಗಡೆ, ಜ್ಯೂಲಿಯಾನ ಫರ್ನಾಂಡೀಸ್, ಪ್ರತಿಭಾ ಭಟ್ ಹಾಗೂ ಸಂಸ್ಥೆಯ ಪ್ರಮುಖ ಸಿಬ್ಬಂದಿ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಸ್ವಾಗತಿಸಿದರು. ಪ್ರೊ.ಕೆ.ಎನ್. ಹೊಸಮನಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.