ADVERTISEMENT

ಶಿರಸಿ | ಭಯೋತ್ಪಾದಕ ಸಂಘಟನೆ ಸಂಪರ್ಕ: ಆರೋಪಿ ವಶಕ್ಕೆ ಪಡೆದ ಎನ್‌ಐಎ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 14:22 IST
Last Updated 18 ಜೂನ್ 2024, 14:22 IST
<div class="paragraphs"><p>ಎನ್‌ಐಎ (ಸಂಗ್ರಹ ಚಿತ್ರ)</p></div>

ಎನ್‌ಐಎ (ಸಂಗ್ರಹ ಚಿತ್ರ)

   

ಶಿರಸಿ: ಭಯೋತ್ಪಾದಕ ಸಂಘಟನೆ ಜೊತೆಗಿನ ಸಂಪರ್ಕದ ಹಿನ್ನೆಲೆಯಲ್ಲಿ ತಾಲ್ಲೂಕಿನ ದಾಸನಕೊಪ್ಪದ ಅಬ್ದುಲ್ ಶಕ್ಕೂರ್ ಎಂಬ ಆರೋಪಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳು, ಮಂಗಳವಾರ ವಶಕ್ಕೆ ಪಡೆದು ವಿಚಾರಣೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.

‘ದುಬೈನಲ್ಲಿ ಕೆಲಸ ಮಾಡುವ ಅಬ್ದುಲ್ ಶಕ್ಕೂರ ಬಕ್ರೀದ್ ಆಚರಣೆಗೆ ಕೆಲ ದಿನಗಳ ಹಿಂದೆ ಗ್ರಾಮಕ್ಕೆ ಬಂದಿದ್ದ. ಆನ್‌ಲೈನ್ ಮೂಲಕ ಭಯೋತ್ಪಾದಕ ಸಂಘಟನೆ ಜೊತೆ ಹೊಂದಿದ ಮತ್ತು ಪಾಸ್‌ಪೋರ್ಟ್‌ಗೆ ಸಂಬಂಧಿಸಿದಂತೆ ನಕಲಿ ದಾಖಲೆ ನೀಡಿದ ಆರೋಪವಿದೆ. ಬನವಾಸಿ ಪೊಲೀಸರ ಸಹಕಾರದೊಂದಿಗೆ ಎನ್‌ಐಎ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. 2017ರಲ್ಲೂ ಆರೋಪಿಯನ್ನು ಎನ್‌ಐಎ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.