ಶಿರಸಿ: ತಾಲ್ಲೂಕಿನ ಪ್ರಸಿದ್ಧ ಶಿವನ ತಾಣ ಎನಿಸಿರುವ ಪಂಚಲಿಂಗ ಶ್ರೀಲಕ್ಷ್ಮೀನಾರಾಯಣ ಪಂಚಲಿಂಗೇಶ್ವರ ದೇವರ ಕಾರ್ತಿಕ ದೀಪೋತ್ಸವ ನ.14ರಂದು ಜರುಗಲಿದೆ.
ಬೆಳಿಗ್ಗೆ 6.30ಕ್ಕೆ ದೇವರ ಫಲ ಪಂಚಾಮೃತ ಅಭಿಷೇಕ ಹಾಗೂ ಶ್ರೀಲಕ್ಷ್ಮೀನಾರಾಯಣ ದೇವಾಲಯದಲ್ಲಿ ಅಥರ್ವಶೀರ್ಷ, ಏಕಾದಶ ರುದ್ರ, ಶ್ರೀಸೂಕ್ತ, ಪುರುಷಸೂಕ್ತ, ಕಲೋಕ್ತ ಪೂಜೆ ಹಾಗೂ ಈಶ್ವರ ದೇವಾಲಯದಲ್ಲಿ ಅಥರ್ವಶೀರ್ಷ, ದುರ್ಗಾಸೂಕ್ತಾದಿಪೂರ್ವಕ, ರುದ್ರಾಭಿಷೇಕ ಹಾಗೂ ಕಲೋಕ್ತ ಪೂಜೆ, ಮಧ್ಯಾಹ್ನ ಮಹಾಮಂಗಳಾರತಿ, ದೇವರ ಪಲ್ಲಕ್ಕಿ ಉತ್ಸವ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ದೇವರ ಪಲ್ಲಕ್ಕಿ ಉತ್ಸವದ ಜತೆಯಲ್ಲಿ ದೀಪೋತ್ಸವ, ಅರಳಿಕಟ್ಟೆಯಲ್ಲಿ ದೇವರ ಪೂಜೆ ಹಾಗೂ ದೇವಸ್ಥಾನದಲ್ಲಿ ಅಷ್ಟಾವಧಾನ ಸೇವೆಯ ಕಾರ್ಯಕ್ರಮಗಳು ನಡೆಯಲಿವೆ.
ರಾತ್ರಿ 11.30ಕ್ಕೆ ಹವ್ಯಾಸಿ ಕಲಾಬಳಗ, ಪಂಚಲಿಂಗ ಇವರಿಂದ ಆರ್.ಟಿ.ಹೆಗಡೆ ತೀರ್ಥಗಾನ್ ಹಾಗೂ ಸುಬ್ರಾಯ ಹೆಗಡೆ ಕಲ್ಲರೆಗದ್ದೆ ಇವರ ನಿರ್ದೇಶನದಲ್ಲಿ ಸೇಡಿನ ಜ್ವಾಲೆ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಸಮಸ್ತ ಭಕ್ತರೆಲ್ಲರೂ ಆಗಮಿಸಿ, ದೇವರ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ವಿನಂತಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.