ADVERTISEMENT

ಹಕ್ಲಾಡಿ, ಮಾವಿನಕಟ್ಟೆ ತಂಡ ದಕ್ಷಿಣ ಭಾರತ ಮಟ್ಟಕ್ಕೆ ಆಯ್ಕೆ

ರಾಜ್ಯಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 18:41 IST
Last Updated 28 ಅಕ್ಟೋಬರ್ 2024, 18:41 IST
ಶಿರಸಿಯಲ್ಲಿ ನಡೆದ ರಾಜ್ಯ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಉಡುಪಿ ಜಿಲ್ಲೆ ಹಕ್ಲಾಡಿಯ ಕೆ.ಎಸ್.ಎಸ್. ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ತಂಡದ ಪ್ರದರ್ಶನ
ಶಿರಸಿಯಲ್ಲಿ ನಡೆದ ರಾಜ್ಯ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಉಡುಪಿ ಜಿಲ್ಲೆ ಹಕ್ಲಾಡಿಯ ಕೆ.ಎಸ್.ಎಸ್. ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ತಂಡದ ಪ್ರದರ್ಶನ   

ಶಿರಸಿ: ರಾಜ್ಯ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆ ಹಕ್ಲಾಡಿಯ ಕೆ.ಎಸ್.ಎಸ್. ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ತಂಡ (ಪ್ರಥಮ) ಹಾಗೂ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಮಾವಿನಕಟ್ಟೆ ಸರ್ಕಾರಿ ಪ್ರೌಢಶಾಲೆ ತಂಡ (ದ್ವಿತೀಯ) ಸ್ಥಾನ ಪಡೆದು ದಕ್ಷಿಣ ಭಾರತ ಮಟ್ಟಕ್ಕೆ ಆಯ್ಕೆಯಾಗಿವೆ. 

ಶಿರಸಿಯ ರಂಗಧಾಮದಲ್ಲಿ ಸೋಮವಾರ ಸ್ಪರ್ಧೆ ಆಯೋಜಿಸಲಾಗಿತ್ತು. ಧಾರವಾಡ ಮಾಳಾಪುರ ಗುಬ್ಬಚ್ಚಿಗೂಡು ಪ್ರೌಢಶಾಲೆ ತಂಡ ತೃತೀಯ ಸ್ಥಾನ ಪಡೆದಿದೆ. ಇದೇ ವೇದಿಕೆಯಲ್ಲಿ ಉಡುಪಿ ತಂಡದ ಪ್ರಥ್ವಿನ್ (ಉತ್ತಮ ನಿರ್ದೇಶಕ), ಗಣೇಶ ಮಂದರ್ತಿ ಹಾಗೂ ಕಿಶೋರ್ ಕುಮಾರ್ ಶೆಟ್ಟಿ (ಉತ್ತಮ ರಚನೆಕಾರ), ಗುಬ್ಬಚ್ಚಿಗೂಡು ಪ್ರೌಢಶಾಲೆಯ ತುಳಸಿ ಮೊಕಾಶಿ (ಉತ್ತಮ ನಟಿ) ಹಾಗೂ ನಿರಂಜನ (ಉತ್ತಮ ನಟ) ಆಗಿ ಹೊರಹೊಮ್ಮಿದರು.

ಸ್ಪರ್ಧೆಯಲ್ಲಿ ಒಟ್ಟು ಐದು ತಂಡಗಳು ಭಾಗವಹಿಸಿದ್ದವು. ನಿರ್ಣಾಯಕರಾಗಿ ಮೈಸೂರು ನಿರ್ದಿಗಂತದ ನಿರ್ದೇಶಕ ಶ್ರೀಪಾದ ಭಟ್, ಹೊನ್ನಾವರದ ರಂಗಕರ್ಮಿ ಕಿರಣ ಭಟ್ ಹಾಗೂ ಸಂಘಟಕಿ ಪ್ರತಿಭಾ ಸಾಗರ ಸಹಕರಿಸಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.