ಪ್ರಜಾವಾಣಿ ವಾರ್ತೆ
ಶಿರಸಿ: ‘ಅಧ್ಯಾತ್ಮದತ್ತ ಮನಸ್ಸನ್ನು ಕೊಂಡೊಯ್ಯಲು ಭಜನೆ, ಜಪಗಳು ಸಹಕಾರಿ. ಶ್ರೀರಾಮನ ಸ್ಮರಣೆ ನಿತ್ಯವಾದರೆ ಮಾನವ ಜೀವನ ಸಾರ್ಥಕವಾಗುತ್ತದೆ’ ಎಂದು ವಿಧಾನಸಭೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಬುಧವಾರ ಲೋಕಕ್ಷೇಮಕ್ಕಾಗಿ ಪ್ರಾರ್ಥಿಸಿ ದಶಕೋಟಿ ರಾಮ ಜಪಯಜ್ಞಕ್ಕೆ ಪೂರಕವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಅಧಿಕ ಶ್ರಾವಣ ಮಾಸದಲ್ಲಿ ಮಾಡುವ ಸತ್ಕರ್ಮಗಳಿಗೆ ಅತ್ಯಧಿಕ ಫಲವೆಂದು ಶಾಸ್ತ್ರಗಳು ಹೇಳಿವೆ. ಇಂಥ ಕಾಲಘಟ್ಟದಲ್ಲಿ ನಾವೆಲ್ಲರೂ ಸನಾತನ ಪರಂಪರೆಯ ವಾರಸುದಾರರಾಗಬೇಕು’ ಎಂದರು.
ವಿದ್ವಾನ್ ಗಣಪತಿ ಭಟ್ ಕಿಬ್ಬಳ್ಳಿ ವಿಶೇಷ ಉಪನ್ಯಾಸ ನೀಡಿ, ‘ವೈಯಕ್ತಿಕ ಅಪೇಕ್ಷೆಗಿಂತ ದೇವರಿಗಾಗಿ ಮೀಸಲಿಟ್ಟ ಮಾಸವೇ ಅಧಿಕ ಶ್ರಾವಣ ಮಾಸ. ಇದನ್ನು ಪುರುಷೋತ್ತಮ ಮಾಸ ಎಂದೂ ಕರೆಯುತ್ತಾರೆ. ಈ ಹಿನ್ನೆಲೆಯಲ್ಲಿ ಶ್ರೀರಾಮನ ಜಪ ಅನುಷ್ಠಾನ ಶ್ರೇಷ್ಠ ಕಾರ್ಯವಾಗಿದೆ’ ಎಂದು ತಿಳಿಸಿದರು.
ಪ್ರಮುಖರಾದ ಗಂಗಾಧರ ಹೆಗಡೆ, ಗಣಪತಿ ನಾಯ್ಕ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.