ADVERTISEMENT

'ಇನಾಫ್' ತಂತ್ರಾಂಶ ಸಮಸ್ಯೆ ಬಗೆಹರಿಸಲಾಗುವುದು: ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2023, 13:00 IST
Last Updated 1 ಜುಲೈ 2023, 13:00 IST
ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಉತ್ತರಕನ್ನಡ ಜಿಲ್ಲೆಯ ಕೃತಕ ಗರ್ಭಧಾರಣಾ ತಂತ್ರಜ್ಞರ ಕುಂದುಕೊರತೆ ಹಾಗೂ ಇನಾಫ್‌ ತಂತ್ರಾಂಶದಲ್ಲಿ ಉಂಟಾಗುತ್ತಿದ್ದ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಏರ್ಪಡಿಸಿದ್ದ ಸಭೆಯಲ್ಲಿ ಸುರೇಶ್ಚಂದ್ರ ಹೆಗಡೆ ಮಾತನಾಡಿದರು
ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಉತ್ತರಕನ್ನಡ ಜಿಲ್ಲೆಯ ಕೃತಕ ಗರ್ಭಧಾರಣಾ ತಂತ್ರಜ್ಞರ ಕುಂದುಕೊರತೆ ಹಾಗೂ ಇನಾಫ್‌ ತಂತ್ರಾಂಶದಲ್ಲಿ ಉಂಟಾಗುತ್ತಿದ್ದ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಏರ್ಪಡಿಸಿದ್ದ ಸಭೆಯಲ್ಲಿ ಸುರೇಶ್ಚಂದ್ರ ಹೆಗಡೆ ಮಾತನಾಡಿದರು    

ಶಿರಸಿ: ಕೃತಕ ಗರ್ಭಧಾರಣೆಯ ಮಾಹಿತಿಯನ್ನು 'ಇನಾಫ್' ತಂತ್ರಾಂಶದಲ್ಲಿ ಅಳವಡಿಸುವುದು ಕಡ್ಡಾಯವಾಗಿದೆ. ಆದರೆ ತಂತ್ರಾಂಶದಲ್ಲಿ ಮಾಹಿತಿ ಅಳವಡಿಸುವಾಗ ಅನೇಕ ಸಮಸ್ಯೆ ಎದುರಾಗುತ್ತಿದ್ದು, ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಸಹಕಾರ ಹಾಲು ಉತ್ಪಾದಕರ ಸಂಘಗಳ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಹೇಳಿದರು. 

ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಉತ್ತರಕನ್ನಡ ಜಿಲ್ಲೆಯ ಕೃತಕ ಗರ್ಭಧಾರಣಾ ತಂತ್ರಜ್ಞರ ಕುಂದುಕೊರತೆ ಹಾಗೂ ಇನಾಫ್‌ ತಂತ್ರಾಂಶದ ಸಮಸ್ಯೆ ಬಗೆಹರಿಸುವ ಸಲುವಾಗಿ ನಗರದ ಟಿ.ಎಂ.ಎಸ್.ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಚರ್ಚೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಿದೆ ಎಂದರು. 

ಕೃತಕ ಗರ್ಭಧಾರಣಾ ತಂತ್ರಜ್ಞ ನರಸಿಂಹ ಹೆಗಡೆ ಮಾತನಾಡಿ, ತಂತ್ರಾಂಶದಲ್ಲಿ ಕೇವಲ 20 ಗ್ರಾಮಗಳಲ್ಲಿ ಮಾತ್ರ ಕೃತಕ ಗರ್ಭಧಾರಣಾ ಮಾಹಿತಿ ಅಳವಡಿಸಲು ಅವಕಾಶವಿದೆ. ಇದರಿಂದ 20ಕ್ಕಿಂತಲೂ ಹೆಚ್ಚಿನ ಗ್ರಾಮಗಳಿಗೆ ತೆರಳಿ ಕೃತಕ ಗರ್ಭಧಾರಣಾ ಕಾರ್ಯ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.  

ADVERTISEMENT

ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ. ರಾಕೇಶ ಬಾಂಗ್ಲೆ, ಒಬ್ಬ ಕೃತಕ ಗರ್ಭಧಾರಣಾ ತಂತ್ರಜ್ಞ 20ಕ್ಕಿಂತಲೂ ಹೆಚ್ಚಿನ ಗ್ರಾಮಗಳಿಗೆ ತೆರಳಿ ಕೃತಕ ಗರ್ಭಧಾರಣಾ ಕಾರ್ಯ ಕೈಗೊಂಡಿದ್ದರೆ ಅಂತಹ ತಂತ್ರಜ್ಞರಿಗೆ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಲಾಗಿನ್‌ ಐಡಿ ನೀಡಲಾಗುವುದು ಎಂದರು. 

ಯಲ್ಲಾಪುರದ ನೊಡೆಲ್‌ ಅಧಿಕಾರಿ ಡಾ. ಶ್ರೀನಿವಾಸ ಪಾಟೀಲ್‌  ತಂತ್ರಾಂಶದ ಬಗ್ಗೆ ಹೆಚ್ಚಿನ ತಾಂತ್ರಿಕ ಮಾಹಿತಿಯನ್ನು ಕೃತಕ ಗರ್ಭಧಾರಣಾ ತಂತ್ರಜ್ಞರಿಗೆ ನೀಡಿದರು. ಒಕ್ಕೂಟದ ನಿರ್ದೇಶಕರಾದ ಶಂಕರ ಹೆಗಡೆ, ಪರಶುರಾಮ ನಾಯ್ಕ, ಜಂಟಿ ನಿರ್ದೇಶಕ ಡಾ. ವೀರೇಶ ತರಲಿ, ಸಹಾಯಕ ನಿರ್ದೇಶಕ ಡಾ. ಗಜಾನನ ಹೊಸ್ಮನಿ, ಉತ್ತರಕನ್ನಡ ಜಿಲ್ಲಾ ಮುಖ್ಯಸ್ಥ ಎಸ್‌.ಎಸ್‌.ಬಿಜೂರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.