ADVERTISEMENT

ಕಾರವಾರ: ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸ್ಕೇಟಿಂಗ್ ಪಟುಗಳಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 14:23 IST
Last Updated 5 ಡಿಸೆಂಬರ್ 2023, 14:23 IST
ಬೆಳಗಾವಿಯಲ್ಲಿ ತರಬೇತಿ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಉತ್ತರ ಕನ್ನಡ ಜಿಲ್ಲೆಯ ಸ್ಕೇಟಿಂಗ್‍ಪಟುಗಳು
ಬೆಳಗಾವಿಯಲ್ಲಿ ತರಬೇತಿ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಉತ್ತರ ಕನ್ನಡ ಜಿಲ್ಲೆಯ ಸ್ಕೇಟಿಂಗ್‍ಪಟುಗಳು   

ಕಾರವಾರ: 61ನೇ ರಾಷ್ಟ್ರಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್‌ಗೆ ಉತ್ತರಕನ್ನಡ ಜಿಲ್ಲೆಯ 31 ಜನರು ಆಯ್ಕೆಯಾಗಿದ್ದು, ಈಚೆಗೆ ಬೆಳಗಾವಿಯ ಶಿವಗಂಗಾ ಸ್ಕೇಟಿಂಗ್ ರಿಂಕ್‌ನಲ್ಲಿ ಆಯ್ಕೆಯಾದ ಸ್ಕೇಟರ್ಸ್‌ಗಳಿಗೆ ತರಬೇತಿ ನಡೆಯಿತು.

15 ದಿನಗಳ ಕಾಲ ನಡೆದ  ತರಬೇತಿಯಲ್ಲಿ ರಾಜ್ಯದ ಬೆಂಗಳೂರು, ತುಮಕೂರು, ಬೆಳಗಾವಿ ಸೇರಿದಂತೆ ಇತರೆ ಜಿಲ್ಲೆಗಳ ಹಾಕಿ ಸ್ಕೇಟರ್ಸ್‌ಗಳೊಂದಿಗೆ ಉತ್ತರಕನ್ನಡ ಜಿಲ್ಲೆಯ ಕಾರವಾರ, ಕೈಗಾ, ಶಿರಸಿ, ಮುಂಡಗೋಡು, ಯಲ್ಲಾಪುರದ ವಿದ್ಯಾರ್ಥಿಗಳು ವಿಶೇಷ ತರಬೇತಿ ಪಡೆದುಕೊಂಡರು.

ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ಮುಖ್ಯ ತರಬೇತುದಾರ ದಿಲೀಪ ಹಣಬರ, ಮಂಜಪ್ಪ, ಅಬಿದ್, ಸಚಿನ್  ತರಬೇತಿ ನೀಡಿದ್ದರು.

ADVERTISEMENT

ತರಬೇತಿ ಪಡೆದ ಸ್ಕೇಟರ್ಸ್‌ಗಳು ಡಿ.10 ರಿಂದ 21ರ ವರೆಗೆ ಚಂಡೀಗಡದಲ್ಲಿ ನಡೆಯುವ ನ್ಯಾಷನಲ್ ಚಾಂಪಿಯನ್ ಶಿಪ್‍ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತರಬೇತುದಾರ ದಿಲೀಪ್ ಹಣಬರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.