ADVERTISEMENT

ಗೋಕರ್ಣ: ನಿರಂತರ ಮಳೆಗೆ ರಾಮತೀರ್ಥದ ಬಳಿ ಗುಡ್ಡ ಕುಸಿತ

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 4:17 IST
Last Updated 16 ಜುಲೈ 2024, 4:17 IST
   

ಗೋಕರ್ಣ: ಇಲ್ಲಿಯ ಮುಖ್ಯ ಸಮುದ್ರ ತೀರದಲ್ಲಿರುವ ರಾಮತೀರ್ಥದ ರಾಮದೇವಸ್ಥಾನದ ಬಳಿ, ರಾತ್ರಿ ಸುರಿದ ನಿರಂತರ ಮಳೆಗೆ ಗುಡ್ಡ ಕುಸಿದುಬಿದ್ದಿದೆ. ದೇವಸ್ಥಾನಕ್ಕೆ ಸ್ವಲ್ಪದರಲ್ಲಿಯೇ ಭಾರೀ ಹಾನಿಯಾಗುವುದು ತಪ್ಪಿದೆ.

ಸುಮಾರು 200 ಮೀಟರ್ ಎತ್ತರದಿಂದ ಮಣ್ಣಿನ ಧರೆ ಕುಸಿದು ಬಿದ್ದಿದೆ. ದೇವಸ್ಥಾನದ ಬಲಬದಿಯ ಭಾಗದಲ್ಲಿ ಈ ಘಟನೆ ನಡೆದಿದೆ. ಕುಡಿಯುವ ನೀರನ್ನು ಸಂಗ್ರಹಿಸಲು ಮಾಡಿದ ನೀರಿನ ಟ್ಯಾಂಕ್, ತಗಡಿನ ಚಾವಣಿ ಸಂಪೂರ್ಣ ನುಚ್ಚುಗುಜ್ಜಾಗಿದೆ.

ಗುಡ್ಡದ ಮೇಲೆ ಅವ್ಯಾಹತವಾಗಿ ಕಲ್ಲುಗಣಿ ಕೊರೆಯುತ್ತಿರುವುದೇ ಕುಸಿತವಾಗಲು ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ನೈಸರ್ಗಿಕವಾಗಿ ಬರುವ ರಾಮಾವಾಟರ್ ಸಹ ಮುಂದಿನ ದಿನಗಳಲ್ಲಿ ಉಪಯೋಗಕ್ಕೆ ಸಿಗದ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.