ಹೊನ್ನಾವರ: ತಾಲ್ಲೂಕಿನ ಹೆರಂಗಡಿ ಗ್ರಾಮದ ಹೊಸ್ಕೇರಿಹೊಂಡ ಮಜರೆಯಲ್ಲಿ ನ.14ರಿಂದ 16ರ ನಡುವಿನ ಅವಧಿಯಲ್ಲಿ ಎರಡು ಮನೆಗಳಲ್ಲಿ ಕಳ್ಳತನ ನಡೆದಿರುವ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಹ್ಮದ್ ಹುಸೇನ್ ಖಾಲಿದ್ ಖುವರ್ ಅವರ ಮನೆಯಲ್ಲಿ ₹8.95 ಲಕ್ಷ ಮೌಲ್ಯದ 184 ಗ್ರಾಂ ವಿವಿಧ ಬಂಗಾರದ ಆಭರಣಗಳು ಹಾಗೂ ₹35 ಸಾವಿರ ನಗದು ಕಳವಾಗಿದ್ದರೆ, ಮಹ್ಮದ್ ಗೌಸ್ ಮಹ್ಮದ್ ಪಕ್ಕಿತಾಯಾ ಅವರ ಮನೆಯಲ್ಲಿ ₹1.25 ಲಕ್ಷ ಬೆಲೆಯ ಚಿನ್ನದ ಆಭರಣ ಕಳ್ಳತನವಾಗಿದೆ.
ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಕಳವು ನಡೆದಿದೆ. ಅಪರಾಧ ವಿಭಾಗದ ಪಿಎಸ್ಐ ರಾಜಶೇಖರ ಮಂದಲಿ ಅವರ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿದ್ದು ಕಳ್ಳರ ಪತ್ತೆ ಕಾರ್ಯ ನಡೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.