ADVERTISEMENT

ಮುರ್ಡೇಶ್ವರ: ಪ್ರವಾಸಿಗರಿಬ್ಬರು ನೀರು ಪಾಲು, ಒಬ್ಬರ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2021, 13:56 IST
Last Updated 11 ಜುಲೈ 2021, 13:56 IST
ಭಟ್ಕಳ ತಾಲ್ಲೂಕಿನ ಮುರ್ಡೇಶ್ವರದ ಕಡಲತೀರ
ಭಟ್ಕಳ ತಾಲ್ಲೂಕಿನ ಮುರ್ಡೇಶ್ವರದ ಕಡಲತೀರ   

ಭಟ್ಕಳ: ತಾಲ್ಲೂಕಿನ ಮುರ್ಡೇಶ್ವರಕ್ಕೆ ಪ್ರವಾಸ ಬಂದಿದ್ದ ಶಿವಮೊಗ್ಗ ಜಿಲ್ಲೆಯ ನಾಲ್ವರು ಪ್ರವಾಸಿಗರಲ್ಲಿ, ಇಬ್ಬರು ಸಮುದ್ರದಲ್ಲಿ ಭಾನುವಾರ ನೀರು ಪಾಲಾಗಿದ್ದಾರೆ. ಒಬ್ಬರ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬರಿಗೆ ಹುಡುಕಾಟ ಮುಂದುವರಿದಿದೆ.

ಈಜಲು ಸಮುದ್ರಕ್ಕೆ ಇಳಿದಿದ್ದ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಮಾಸೂರು ನಿವಾಸಿಗಳಾದ ಮಂಜುನಾಥ (26) ಹಾಗೂ ಮಣಿಕಂಠ (35) ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋದವರು. ಮಂಜುನಾಥನ ಮೃತದೇಹ ದಡಕ್ಕೆ ತೇಲಿಕೊಂಡು ಬಂದಿದೆ.

ಭಟ್ಕಳದಲ್ಲಿ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಸಮುದ್ರದಲ್ಲಿ ಅಲೆಗಳ ಸೆಳೆತ ಜೋರಾಗಿದೆ. ಸಮುದ್ರ ಪ್ರಕ್ಷುಬ್ಧವಾಗಿರುವ ಕಾರಣ ದೇವಸ್ಥಾನದ ಬಲಭಾಗದಲ್ಲಿ ಸಮುದ್ರಕ್ಕೆ ಪ್ರವಾಸಿಗರು ತೆರಳುವುದನ್ನು ಪ್ರವಾಸೋದ್ಯಮ ಇಲಾಖೆ ನಿಷೇಧಿಸಿದೆ. ಆದರೆ, ಪ್ರವಾಸಿಗರು ದೇವಸ್ಥಾನದ ಎಡಭಾಗದಲ್ಲಿ ಕದ್ದುಮುಚ್ಚಿ ಈಜಲು ಹೋಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ADVERTISEMENT

ಚಂದನ್ ಹಾಗೂ ಪ್ರವೀಣ ಎಂಬುವವರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ. ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.