ಜೋಯಿಡಾ: ತಾಲೂಕಿನ ಮೆಸ್ತ ಬಿರೋಡದಲ್ಲಿ ಮನೆ ಮೇಲೆ ಮರ ಬಿದ್ದು ಮನೆ ನೆಲಕಚ್ಚಿದ ಘಟನೆ ಇಂದು ಶನಿವಾರ ಬೆಳಿಗ್ಗೆ ನಡೆದಿದೆ.
ಪ್ರಕಾಶ ಸೋಮಣ್ಣ ಗಾವಡಾ ಮನೆ ಇದಾಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಮನೆ ಮೇಲೆ ಗಿಡ ವಾಲುತ್ತಿರುವದನ್ನು ಗಮನಿಸಿದ ಸ್ಥಳೀಯರು ಮನೆಯಿಂದ ಹೊರಗೆ ಬರುವಂತೆ ತಿಳಿಸಿದರು ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ನಿನ್ನೆ ರಾತ್ರಿಯಿಂದ ಬಿಡುವಿಲ್ಲದೆ ಮಳೆ ಗಾಳಿ ಆಗುತ್ತಿದೆ ಇಂದು ಬೆಳಿಗ್ಗೆ ವರೆಗೆ 101 ಮಿ.ಮಿ ಮಳೆಯಾಗಿದೆ, ಸದ್ಯ ಮನೆ ಮೇಲೆ ಮರ ಬಿದ್ದ ಕಾರಣ ಮನೆ ಇಲ್ಲದೇ ಬೇರೆ ಯವರ ಮನೆಯಲ್ಲಿ ಪ್ರಕಾಶ ಸೋಮಣ್ಣ ಗಾವಡಾ ಕುಟುಂಬ ಆಶ್ರಯ ಪಡೆಯುವಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.