ADVERTISEMENT

ಹೆರಾವಲಿ: ಮತ್ತೊಂದು ಕಾಡು ಹಂದಿ ಅಸಹಜ ಸಾವು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2024, 12:35 IST
Last Updated 19 ಸೆಪ್ಟೆಂಬರ್ 2024, 12:35 IST
ಕಾಡು ಹಂದಿಯ ಕಳೆಬರವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದರು
ಕಾಡು ಹಂದಿಯ ಕಳೆಬರವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದರು   

ಹೊನ್ನಾವರ: ತಾಲ್ಲೂಕಿನ ಹೆರಾವಲಿ ಗ್ರಾಮದಲ್ಲಿ ಕಾಡುಹಂದಿಗಳ ಅಸಹಜ ಸಾವಿನ ಸರಣಿ ಮುಂದುವರಿದಿದ್ದು ಗುರುವಾರ ಮತ್ತೊಂದು ಕಾಡುಹಂದಿಯ ಮೃತದೇಹ ಪತ್ತೆಯಾಗಿದೆ.

ಗುರುವಾರ ಪತ್ತೆಯಾದ ಕಾಡುಹಂದಿ 2-3 ದಿನಗಳ ಹಿಂದೆ ಸತ್ತಿರಬಹುದೆಂದು ಶಂಕಿಸಲಾಗಿದ್ದು ಕೊಳೆತ ಸ್ಥಿತಿಯಲ್ಲಿತ್ತು. ಸುದ್ದಿ ತಿಳಿದ ಉಪವಲಯ ಅರಣ್ಯಾಧಿಕಾರಿ ವಿಶಾಲ ಡಿ. ಇತರ ಸಿಬ್ಬಂದಿ ಜೊತೆ ತಕ್ಷಣ ಸ್ಥಳಕ್ಕೆ ಬಂದು ಹಂದಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದರು.

ಕಳೆದ 10 ದಿನಗಳಲ್ಲಿ ಹೆರಾವಲಿ ಗ್ರಾಮದ ವಿವಿಧೆಡೆ 5 ಕ್ಕೂ ಹೆಚ್ಚು ಕಾಡು ಹಂದಿಗಳ ಮೃತದೇಹ ಪತ್ತೆಯಾಗಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ADVERTISEMENT

ಹಂದಿಗಳು ಅಸಹಜವಾಗಿ ಸಾವನ್ನಪ್ಪುತ್ತಿರುವುದಕ್ಕೆ ಆಹಾರದ ಕೊರತೆ, ವಿಷ ಪ್ರಾಷನ ಅಥವಾ ಯಾವುದೋ ಕಾಯಿಲೆ ಕಾರಣವಿರಬಹುದೆಂದು ಊಹಿಸಲಾಗಿದೆ. ‘ಸತ್ತ ಹಂದಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಸಾವಿನ ಕಾರಣ ತಿಳಿದುಬರಬೇಕಿದೆ’ ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.