ADVERTISEMENT

ದಾಂಡೇಲಿ | ಸಂಚಾರ ನಿಯಮ ಉಲ್ಲಂಘನೆ: ₹18,000 ದಂಡ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 13:46 IST
Last Updated 1 ಆಗಸ್ಟ್ 2024, 13:46 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ದಾಂಡೇಲಿ: ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪಿಎಸ್ಐ ಯಲ್ಲಪ್ಪ. ಎಸ್. ನೇತೃತ್ವದಲ್ಲಿ ಬುಧವಾರ ಬೆಳಗಿನ ಜಾವ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಯಿತು.

ಸಂಚಾರ ನಿಯಮ ಉಲ್ಲಂಘಿಸಿದ 20ಕ್ಕೂ ಹೆಚ್ಚು ವಾಹನಗಳನ್ನು ಠಾಣೆಗೆ ತಂದು ಡಿವೈಎಸ್ಪಿ ಶಿವಾನಂದ ಮದರಖಂಡಿ ಅವರು ವಾಹನ ಚಲಾಯಿಸುವಾಗ ಹೆಲ್ಮೆಟ್ ಬಳಸುವಂತೆ, ಅಪ್ರಾಪ್ತರಿಗೆ ವಾಹನ ನೀಡದಂತೆ, ವಾಹನದ ದಾಖಲಾತಿಗಳನ್ನು ಸರಿಯಾಗಿ ಇಟ್ಟುಕೊಳ್ಳುವಂತೆ ತಿಳಿಸಿದ್ದಾರೆ.

ADVERTISEMENT

ಸಿಪಿಐ ಭೀಮಣ್ಣ ಸೂರಿ ಸಂಚಾರಿ ನಿಯಮಗಳ ಕುರಿತು ಜಾಗೃತಿ ನೀಡಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿದ 21 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ ₹18,000 ದಂಡ ವಿಧಿಸಿದ್ದಾರೆ.

ವೇಗ ನಿಯಂತ್ರಕ ರಾಡಾರ್ ಕಾರ್ಯಾರಂಭ: ರಾಜ್ಯದ ಯಾವುದೇ ರಸ್ತೆಯಲ್ಲಿ ಆಗಸ್ಟ್ 1ರಿಂದ ಗಂಟೆಗೆ 130 ಕಿ.ಮೀ ವೇಗದಲ್ಲಿ ವಾಹನ ಚಲಾಯಿಸುವರ ವಿರುದ್ಧ ಎಫ್ಐಆರ್ ದಾಖಲಿಸಲು ಎಡಿಜಿಪಿ ಅಲೋಕ‌ಕುಮಾರ ಸೂಚನೆ ನೀಡಿದ್ದು, ಈಗ ದಾಂಡೇಲಿ‌ಯಲ್ಲಿಯೂ ಪೊಲೀಸರಿಂದ ರಾಡಾರ್ ಗನ್ ಕಾರ್ಯಾಚರಣೆ ನಡೆಯಲಿದೆ.

ಬೇಜವಾಬ್ದಾರಿತನದಿಂದ ವಾಹನ ಚಾಲನೆ ಮಾಡುವ ಸವಾರರನ್ನು ನಿಯಂತ್ರಿಸಲು ಇನ್ನು‌ಮುಂದೆ ಪೊಲೀಸರ ತಂಡ ರಾಡರ್ ಗನ್ ಕಾರ್ಯಾಚರಣೆ ನಡೆಸುತ್ತಾರೆ. 

ಮಂಗಳವಾರ ದಾಂಡೇಲಿಗೆ ಬಂದ ರಾಡಾರ್ ಗನ್ ವೇಗ ಮಾಪನವನ್ನು ದಾಂಡೇಲಿ ಗ್ರಾಮಿಣ ಠಾಣೆಯ ಪಿ.ಎಸ್.ಐ ಜಗದೀಶ ನಾಯಕ ಅವರು ಪ್ರಾಯೋಗಿಕ ಪರೀಕ್ಷೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.