ADVERTISEMENT

ನೊಂದ ಕುಟುಂಬಗಳ ಭೇಟಿ, ಆರ್ಥಿಕ ಸಹಾಯ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 16:04 IST
Last Updated 17 ನವೆಂಬರ್ 2024, 16:04 IST

ಸಿದ್ದಾಪುರ: ವೈದ್ಯರ ನಿರ್ಲಕ್ಷದಿಂದ ಈಚೆಗೆ ಮೃತಪಟ್ಟ ಹೊಸೂರಿನ ವಿನೋದಾ ಹಾಗೂ ಕೋಣನಗದ್ದೆಯ ಜ್ಯೋತಿ ಅವರ ಮನೆಗೆ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಶನಿವಾರ ಭೇಟಿ ನೀಡಿ ಎರಡು ಕುಟುಂಬಕ್ಕೂ ತಲಾ ₹50 ಸಾವಿರ ಧನಸಹಾಯ ಮಾಡಿದರು. 

ಅದೇ ರೀತಿ ಅನಾರೋಗ್ಯದಿಂದ ನಿಧನರಾದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಕೋಲಸಿರ್ಸಿಯ ಈರೇಶ ನಾಯ್ಕ ಹಾಗೂ ಚನಮಾಂವನ ಈಶ್ವರ ನಾಯ್ಕ ಅವರ ಮನೆಗೆ ಭೇಟಿ ನೀಡಿ ಆರ್ಥಿಕ ಸಹಾಯ ನೀಡಿದರು. ಜತೆಗೆ ವಿದ್ಯುತ್ ಅವಘಡದಿಂದ ಕೊಟ್ಟಿಗೆಗೆ ಬೆಂಕಿ ತಗುಲಿ ಜಾನುವಾರು ಮೃತಪಟ್ಟ ಕೋಲಶಿರ್ಸಿಯ ಉಮೇಶ ನಾಯ್ಕ ಅವರ ಮನೆಗೆ ಭೇಟಿ ನೀಡಿ ಆರ್ಥಿಕ ಸಹಾಯ ನೀಡಿದರು.

ತಾಲ್ಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ.ನಾಗಾರಾಜ, ಡಿಸಿಸಿ ಉಪಾಧ್ಯಕ್ಷ ವಿ.ಎನ್.ನಾಯ್ಕ, ಪ್ರಮುಖರಾದ ಸಿ.ಆರ್.ನಾಯ್ಕ, ಎಚ್.ಕೆ.ಶಿವಾನಂದ, ಎಸ್.ಕೆ.ನಾಯ್ಕ ಕಡಕೇರಿ ಸೇರಿದಂತೆ ಅನೇಕರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.