ADVERTISEMENT

ದಾಂಡೇಲಿ | ಮತದಾನ ಜಾಗೃತಿ: ಬೈಕ್ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 1 ಮೇ 2024, 12:50 IST
Last Updated 1 ಮೇ 2024, 12:50 IST
ದಾಂಡೇಲಿ ಬಂಗೂರನಗರ ಪದವಿ ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ಕಡ್ಡಾಯ ಮತದಾನ ಜಾಗೃತಿಗಾಗಿ ಬುಧವಾರ ಬೈಕ್ ರ್‍ಯಾಲಿ ನಡೆಯಿತು
ದಾಂಡೇಲಿ ಬಂಗೂರನಗರ ಪದವಿ ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ಕಡ್ಡಾಯ ಮತದಾನ ಜಾಗೃತಿಗಾಗಿ ಬುಧವಾರ ಬೈಕ್ ರ್‍ಯಾಲಿ ನಡೆಯಿತು   

ದಾಂಡೇಲಿ: ಬಂಗೂರನಗರ ಪದವಿ ಕಾಲೇಜಿನ ಎನ್ಎಸ್ಎಸ್ ಹಾಗೂ ರಾಜ್ಯಶಾಸ್ತ್ರ ವಿಭಾಗ ಹಾಗೂ ಸುವರ್ಣ ಮಹೋತ್ಸವದ ಆಚರಣೆ ಸಮಿತಿ ಸಂಯುಕ್ತಾಶ್ರಯದಲ್ಲಿ ಬುಧವಾರ ಮತದಾನ ಜಾಗೃತಿ ಅಂಗವಾಗಿ ಬೈಕ್ ರ್‍ಯಾಲಿ ನಡೆಯಿತು.

ದಾಂಡೇಲಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ರೋಹಿಣಿ ಬಸಾಪುರ ಬೈಕ್ ರ್‍ಯಾಲಿಗೆ ಚಾಲನೆ ನೀಡಿದರು.

ಸೋಮಾನಿ ಸರ್ಕಲ್, ಕೆ.ಸಿ ಸರ್ಕಲ್, ಗಣೇಶನಗರ ಮುಂತಾದ ಕಡೆ ಸಂಚರಿಸಿ ನಾಗರಿಕರಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳು ಮತ್ತು ಬೋಧಕ, ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.

ADVERTISEMENT

ಕಾಲೇಜಿನ ರಂಗನಾಥ ಸಭಾಭವನದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಗೋಪಿ ಚೌಹಾನ್ ಅವರು ಇವಿಎಂ ಯಂತ್ರದ ಪ್ರಾತ್ಯಕ್ಷಿಕೆ ಮೂಲಕ ಮತ ಚಲಾವಣೆ ಹಾಗೂ ಇವಿಂ ಕಾರ್ಯ ವೈಖರಿ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಪ್ರಾಚಾರ್ಯ ಬಿ.ಎಲ್ ಗುಂಡೂರ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಚುನಾವಣಾ ಸಾಕ್ಷರತಾ ಕ್ಲಬ್‌ನ ಸಂಯೋಜಕ ಎಸ್.ಎಸ್ ಹಿರೇಮಠ, ಎಸ್.ಎಸ್. ದೊಡ್ಮನಿ, ನಯನಾ ರೇವಣಕರ್, ಅನಿತಾ ನಾಯರ, ಪ್ರಕಾಶ್ ಹೊಸಮನಿ, ಬಾಗೇವಾಡಿ, ವಿನಯ, ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.