ಕಾರವಾರ: ಅಂಕೋಲಾ ತಾಲ್ಲೂಕಿನ ಹಟ್ಟಿಕೇರಿ ಬಳಿ ಪಾಂಡುಪುರ ಹಳ್ಳದಲ್ಲಿ ಶುಕ್ರವಾರ ರಾತ್ರಿ ಕಾಡುಕೋಣದ ಕಳೆಬರ ಪತ್ತೆಯಾಗಿದೆ.
ನೀರಿನಲ್ಲಿ ತೇಲಿ ಬರುತ್ತಿದ್ದ ಕಳೆಬರವನ್ನು ಬೊಗ್ರಿಗದ್ದೆಯ ಕಟ್ಟಿಗೆ ಸಮೀಪದ ಸೇತುವೆ ಬಳಿ ಗ್ರಾಮಸ್ಥರು ತಡೆಹಿಡಿದಿಟ್ಟು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಕ್ರೇನ್ ಬಳಸಿ ಮೃತದೇಹವನ್ನು ದಡಕ್ಕೆ ಎಳೆದು ತರಲಾಗಿತ್ತು.
‘ಕಾಡುಕೋಣದ ಕುತ್ತಿಗೆ ಬಳಿ ಗಾಯದ ಗುರುತು ಇದ್ದುದರಿಂದ ಬೇಟೆಗೆ ಯತ್ನಿಸಿರುವ ಸಾಧ್ಯತೆ ಇದೆ’ ಎಂದು ಸ್ಥಳೀಯರು ಶಂಕಿಸಿದ್ದರು.
‘ಕಾಡುಕೋಣ ಸಹಜವಾಗಿ ಸಾವನ್ನಪ್ಪಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಎರಡು ದಿನಗಳಲ್ಲಿ ಖಚಿತ ವರದಿ ಕೈಸೇರಲಿದೆ’ ಎಂದು ಅಂಕೋಲಾ ಆರ್.ಎಫ್.ಒ ಜಿ.ವಿ.ನಾಯ್ಕ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.