ಯಲ್ಲಾಪುರ: ‘ವಿಶ್ವಮಾನವ ಸಂದೇಶ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಬಾರದು. ಅದರ ಉಪಾಸನೆ ಅತಿಮುಖ್ಯ' ಎಂದು ಚಾರ್ಟರ್ಡ್ ಅಕೌಂಟಂಟ್ ಕಮಲಾಕರ ಭಟ್ಟ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಐ.ಕ್ಯೂ.ಎ.ಸಿ, ಕನ್ನಡ ವಿಭಾಗ ಹಾಗೂ ಸಾಹಿತ್ಯ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ ವಿಶ್ವಮಾನವ ದಿನಾಚರಣೆಯಲ್ಲಿ ಮಾತನಾಡಿದರು.
‘ಕುವೆಂಪು ಸರ್ವಜನಾಂಗದ ಶಾಂತಿಯ ತೋಟದ ಕನಸು ಕಂಡ ಮಹಾನ್ ಚೇತನ’ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಸವಿತಾ ನಾಯ್ಕ ಮಾತನಾಡಿ, ‘ಕುವೆಂಪು ಅವರ ಸಾಹಿತ್ಯದಲ್ಲಿನ ಜೀವನ ಮೌಲ್ಯಗಳನ್ನು ಅರಿತು ಅಳವಡಿಸಿಕೊಳ್ಳಬೇಕು’ ಎಂದರು.
ನಿವೃತ್ತ ಪ್ರಾಂಶುಪಾಲರಾದ ಶ್ರೀರಂಗ ಕಟ್ಟಿ, ಚಾರ್ಟರ್ಡ್ ಅಕೌಂಟಂಟ್ ಜನಾರ್ದನ ಹೆಬ್ಬಾರ್ ಮಾತನಾಡಿದರು. ಹಿರಿಯ ಸಾಮಾಜಿಕ ಕಾರ್ಯಕರ್ತ ಪ್ರೇಮಾನಂದ ನಾಯ್ಕ ಇದ್ದರು.
ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ಕಾಲೇಜು ವಿದ್ಯಾರ್ಥಿಗಳು ಕುವೆಂಪುಗೆ ನುಡಿನಮನ ಸಲ್ಲಿಸಿದರು. ಸಿಂಚನಾ ಗಾಂವ್ಕರ ಪ್ರಾರ್ಥನೆ ಹಾಡಿದರು. ಪ್ರಾರ್ಥನಾ ಭಟ್ ಸ್ವಾಗತಿಸಿದರು. ಕೀರ್ತಿ ಮರಾಠಿ ವಂದಿಸಿದರು, ಸಹನಾ ದೇವಳಿ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.