ADVERTISEMENT

ಮತಾಂಧರಿಗಾಗಿಯೇ ಕೆಲಸ ಮಾಡುವ ಪಕ್ಷ ಕಾಂಗ್ರೆಸ್‌: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 3 ಮೇ 2024, 14:07 IST
Last Updated 3 ಮೇ 2024, 14:07 IST

ಯಲ್ಲಾಪುರ: ‘ಇದು ಕೇವಲ ಬಿಜೆಪಿಯನ್ನು ಗೆಲ್ಲಿಸುವ ಚುನಾವಣೆ ಅಲ್ಲ. ಬದಲಾಗಿ ಭಾರತವನ್ನು ಉಳಿಸುವ ಚುನಾವಣೆ. ಕಾಂಗ್ರೆಸ್‌ನಲ್ಲಿ ‘ಭಾರತ್‌ ಮಾತಾಕಿ ಜೈ’ ಘೋಷಣೆ ಕೂಗಲು ಅನುಮತಿ ಅಗತ್ಯ. ಅವರದ್ದು ಮತಾಂಧರಿಂದ, ಮತಾಂಧರಿಗೋಸ್ಕರ, ಮತಾಂಧರಿಗಾಗಿಯೇ ಕೆಲಸ ಮಾಡುವ ಪಕ್ಷ’ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದರು.

ಪಟ್ಟಣದ ಅಡಿಕೆ ಭವನದಲ್ಲಿ ಶುಕ್ರವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ದೇಶದಿಂದ ಕಾಂಗ್ರೆಸ್‌ ಓಡಿಸಲು ಕಮಲದ ಹೂವಿಗೆ ಮತ ನೀಡಿʼ ಎಂದರು.

ADVERTISEMENT

ʻದೀಘ೯ಕಾಲದ ನಂತರ ರಾಮ ಮಂದಿರ ನಿರ್ಮಾಣವಾಗಿದೆ. ಕಾಶಿಯ ಆದಿ ವಿಶ್ವೇಶ್ವರ, ಮಥುರಾದ ಕೃಷ್ಣನಿಗೂ ನ್ಯಾಯ ಸಿಗಲಿದೆʼ ಎಂದರು.

ವಿಧಾನ ಪರಿಷತ್‌ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ‘ಯಲ್ಲಾಪುರ ಮಂಡಲಕ್ಕೆ ಹಿಡಿದ ಗ್ರಹಣ ಬಿಟ್ಟಿದೆ. ಜೇನು ಹೀರಲು ಬಂದ ಕೆಲ ಇರುವೆಗಳು ಜೇನು ಹೀರಿ ಹೋಗಿವೆ. ಕೆಲವು ಜೇನು ಹುಳಗಳು ಜೇನು ಹೀರಿದ್ದಲ್ಲದೇ ನಮಗೂ ಕಚ್ಚಿ ಹೋಗಿವೆ’ ಎಂದು ಪರೋಕ್ಷವಾಗಿ ಶಾಸಕ ಶಿವರಾಮ ಹೆಬ್ಬಾರ ಅವರನ್ನು ಟೀಕಿಸಿದರು.

ಪಟ್ಟಣ ಪಂಚಾಯ್ತಿ ಮಾಜಿ ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ ಮಾತನಾಡಿ, ‘ಪರಿಶಿಷ್ಟರ ಹಣವನ್ನು ‘ಗ್ಯಾರಂಟಿ’ಗೆ ಬಳಸಿದ್ದು ತಪ್ಪು. ಕಾಂಗ್ರೆಸ್‌ಗೆ ದಲಿತರ ಹೆಸರು ಹೇಳುವ ನೈತಿಕ ಹಕ್ಕು ಇಲ್ಲ’ ಎಂದರು.

ಪ್ರಮುಖರಾದ ಚಂದ್ರಕಲಾ ಭಟ್ಟ ಮಾತನಾಡಿ, ‘ಗ್ಯಾರಂಟಿಯ ಭ್ರಮೆಗೆ ಒಳಗಾಗದಿರಿ. ಇದು ಅಮಾಯಕರನ್ನು ದಾರಿ ತಪ್ಪಿಸುವ ನಡೆ’ ಎಂದರು.

ಜಿಜೆಪಿ ರಾಜ್ಯ ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ. ಪ್ರಮುಖರಾದ ಉಮೇಶ ಭಾಗ್ವತ ಮಾತನಾಡಿದರು. ಪ್ರಮುಖರಾದ ಸೋಮೇಶ್ವರ ನಾಯ್ಕ, ಗೋಪಾಲಕೃಷ್ಣ ಗಾಂವ್ಕರ, ಶ್ರುತಿ ಹೆಗಡೆ, ಗಣಪತಿ ಬೋಳಗುಡ್ಡೆ ಇದ್ದರು. ಪ್ರಸಾದ ಹೆಗಡೆ ಸ್ವಾಗತಿಸಿದರು. ನಟರಾಜ ಗೌಡರ ನಿರ್ವಹಿಸಿ, ವಂದಿಸಿದರು.

ಸಭೆಯ ಆರಂಭಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.