ADVERTISEMENT

ಸಿದ್ದಾಪುರದ ಯುವಕನಿಗೆ ಒಲಿದ ಕಲೆ: ತೆಂಗಿನ ಗರಟೆಯಿಂದ ಚಹಾ ಕಪ್‌!

ರವೀಂದ್ರ ಭಟ್ಟ, ಬಳಗುಳಿ
Published 2 ನವೆಂಬರ್ 2020, 19:45 IST
Last Updated 2 ನವೆಂಬರ್ 2020, 19:45 IST
ತೆಂಗಿನ ಗರಟೆಗಳಿಂದ ವಸ್ತು ತಯಾರಿಕೆಯಲ್ಲಿ ನಿರತರಾಗಿರುವ ವಿವೇಕ ಹೆಗಡೆ.
ತೆಂಗಿನ ಗರಟೆಗಳಿಂದ ವಸ್ತು ತಯಾರಿಕೆಯಲ್ಲಿ ನಿರತರಾಗಿರುವ ವಿವೇಕ ಹೆಗಡೆ.   
""
""
""

ಸಿದ್ದಾಪುರ: ಹಳ್ಳಿಗಳಲ್ಲಿ ಹೆಚ್ಚಿನ ಕಡೆ ಉರುವಲಾಗಿ ಬಳಕೆಯಾಗುವ ತೆಂಗಿನಕಾಯಿಯ ಚಿಪ್ಪು ಅಥವಾ ಗರಟೆಯಿಂದ ಚಹಾ ಕಪ್‌ ಮತ್ತಿತರ ಉಪಯೋಗಿ ವಸ್ತುಗಳನ್ನು ತಾಲ್ಲೂಕಿನ ಹೊನ್ನೇಕೈ ಎಂಬ ಹಳ್ಳಿಯ ಯುವಕ ವಿವೇಕ ಹೆಗಡೆ ತಯಾರಿಸುತ್ತಿದ್ದಾರೆ.

ಮಧ್ಯಮ ವರ್ಗದ ಕೃಷಿ ಕುಟುಂಬದ ಅವರು, ಗರಟೆಗಳು ವ್ಯರ್ಥವಾಗಿ ಹಾಳಾಗುವುದನ್ನು ನೋಡಿ, ಅವುಗಳಿಗೊಂದು ರೂಪು ನೀಡುವ ಉದ್ದೇಶದಿಂದ ಇದನ್ನು ಆರಂಭಿಸಿದರು.

ಚಹಾ ಕಪ್

‘ಗರಟೆಯಿಂದ ವಸ್ತುಗಳನ್ನು ತಯಾರಿಸುವ ಬಗ್ಗೆ ಇಂಟರ್‌ನೆಟ್‌ನಲ್ಲಿ ಹುಡುಕಿದೆ. ಅಲ್ಲಿ ಕೆಲವರು ಗರಟೆಗಳಿಂದ ವಸ್ತುಗಳನ್ನು ಮಾಡಿರುವ ಬಗ್ಗೆ ಮಾಹಿತಿಯೂ ಸಿಕ್ಕಿತುʼ ಎಂದು ವಿವೇಕ ಹೆಗಡೆ ವಿವರಿಸಿದರು.

ADVERTISEMENT

‘ಆರಂಭದಲ್ಲಿ ನಮ್ಮ ಮನೆಯ ತೆಂಗಿನ ಕಾಯಿಗಳ ಗರಟೆಗಳನ್ನೇ ಈ ವಸ್ತುಗಳ ತಯಾರಿಕೆಗೆ ಉಪಯೋಗಿಸಿಕೊಂಡೆ. ಮನೆಯ ಗರಟೆಗಳು ಸಾಕಾಗದೇ ಹೋದಾಗ ಊರಿನ ಇತರ ಮನೆಗಳಿಂದಲೂ ಗರಟೆ ಖರೀದಿಸಿದೆ’ ಎಂದು ಹೇಳಿದರು.

ಸೌಟುಗಳು

ಅವರು ಈಗ ತಮ್ಮ ಊರು ಮಾತ್ರವಲ್ಲದೇ ಸಮೀಪದ ಊರುಗಳ ಸುಮಾರು 1,500 ಮನೆಗಳಿಂದ ಗರಟೆಗಳನ್ನು ಖರೀದಿ ಮಾಡುತ್ತಾರೆ. ಅವುಗಳಿಂದ 50ಕ್ಕೂ ಹೆಚ್ಚು ವೈವಿಧ್ಯಮಯ ವಸ್ತುಗಳನ್ನು ಮಾಡುತ್ತಿದ್ದಾರೆ. ಹಲಗೇರಿಯ ಆನಂದ ಎಂಬುವವರು ಅವರಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ.

‘ನಾನು ತಯಾರಿಸಿದ ವಸ್ತುಗಳ ಬಗ್ಗೆ ಎಲ್‌.ಜಿ. ನಾಯ್ಕ ಎಂಬುವವರು ಫೇಸ್‌ಬುಕ್‌ನಲ್ಲಿ ಬರಹ ಪ್ರಕಟಿಸಿದರು. ಆ ನಂತರ ಹೆಚ್ಚಿನ ಜನ ಈ ಬಗ್ಗೆ ವಿಚಾರಿಸತೊಡಗಿದರು. ಈಗ ರಾಜ್ಯದ ಬೇರೆ ಭಾಗದ ಜನರೂ ಈ ವಸ್ತುಗಳನ್ನು ತಯಾರಿಸಿಕೊಡುವಂತೆ ಕೇಳುತ್ತಿದ್ದಾರೆ. ಸಾಧ್ಯವಾದಷ್ಟೂ ಕಡಿಮೆ ದರದಲ್ಲಿ ವಸ್ತುಗಳನ್ನು ತಯಾರಿಸಿಕೊಡುತ್ತಿದ್ದೇನೆ’ ಎನ್ನುತ್ತಾರೆ ವಿವೇಕ ಹೆಗಡೆ.

ಅವರ ಮೊಬೈಲ್‌ ಫೋನ್ ಸಂಖ್ಯೆ: 94803 98338

ಪೆನ್‌ ಸ್ಟ್ಯಾಂಡ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.