ADVERTISEMENT

ಹೊಸಪೇಟೆಯಲ್ಲಿ 39 ಡಿಗ್ರಿ ಉಷ್ಣಾಂಶ: ತುಂಗಭದ್ರಾ ಜಲಾಶಯದಲ್ಲಿ ಕುಸಿದ ನೀರಿನ ಮಟ್ಟ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2024, 0:51 IST
Last Updated 9 ಮಾರ್ಚ್ 2024, 0:51 IST
ಬಿಸಿಲು
ಬಿಸಿಲು   

ಹೊಸಪೇಟೆ: ಹೊಸಪೇಟೆ ನಗರ ಸೇರಿ ವಿಜಯನಗರ ಜಿಲ್ಲೆಯಾದ್ಯಂತ ಉಷ್ಣಾಂಶ ತೀವ್ರಗತಿಯಲ್ಲಿ ಏರಿಕೆಯಾಗಿದ್ದು, ಶುಕ್ರವಾರ 39 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಮತ್ತೊಂದೆಡೆ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ 7.61 ಟಿಎಂಸಿ ಅಡಿಗೆ ಕುಸಿದಿದೆ.

ಫೆಬ್ರುವರಿ 14ರವರೆಗೆ ಜಿಲ್ಲೆಯಲ್ಲಿ ಉಷ್ಣಾಂಶ 35 ಡಿಗ್ರಿ ಇತ್ತು. ನಂತರದ 15 ದಿನ 36 ಡಿಗ್ರಿ ಆಸುಪಾಸಿದ್ದ ಉಷ್ಣಾಂಶ, ಒಂದು ವಾರದಿಂದ 3 ಡಿಗ್ರಿ ಏರಿಕೆ ಕಂಡಿದೆ. ಮಧ್ಯಾಹ್ನದ ವೇಳೆ ಜನರ ಓಡಾಟ ವಿರಳವಾಗಿದೆ.

ತುಂಗಭದ್ರಾ ಜಲಾಶಯದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 23.82 ಟಿಎಂಸಿ ಅಡಿ ನೀರು ಸಂಗ್ರಹವಿತ್ತು. ಆದರೆ, ಈ ಸಲ ಮಳೆ ಕೊರತೆಯಿಂದ ಜಲಾಶಯ ಭರ್ತಿಯಾಗಿಲ್ಲ. ಸದ್ಯ ಬಲದಂಡೆ ಕೆಳಹಂತ ಕಾಲುವೆ ಮೂಲಕ ಆಂಧ್ರ ಪ್ರದೇಶ ಪಾಲಿನ ನೀರನ್ನು ಹರಿಸಲಾಗುತ್ತಿದ್ದು, ಶುಕ್ರವಾರ 2,242 ಕ್ಯೂಸೆಕ್‌ ನೀರು ಹರಿದಿದೆ. 2 ಟಿಎಂಸಿ ಅಡಿ ಡೆಡ್‌ ಸ್ಟೋರೇಜ್‌ ಇದ್ದು, ಅದು ಬಳಸಲು ಆಗುವುದಿಲ್ಲ. ಹೀಗಾಗಿ ಜಲಾಶಯದಲ್ಲಿ 5 ಟಿಎಂಸಿ ಅಡಿ ನೀರಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.