ADVERTISEMENT

ಪಿಡಿಐಟಿಯಲ್ಲಿ 'ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ ಲ್ಯಾಬ್ ಆರಂಭ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2022, 14:26 IST
Last Updated 30 ಡಿಸೆಂಬರ್ 2022, 14:26 IST
ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ ಶುಕ್ರವಾರ ‘ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌’ ಲ್ಯಾಬ್‌ ಉದ್ಘಾಟಿಸಿ, ಅಲ್ಲಿದ್ದ ಯಂತ್ರೋಪಕರಣಗಳನ್ನು ವೀಕ್ಷಿಸಿದ ಗಣ್ಯರು
ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ ಶುಕ್ರವಾರ ‘ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌’ ಲ್ಯಾಬ್‌ ಉದ್ಘಾಟಿಸಿ, ಅಲ್ಲಿದ್ದ ಯಂತ್ರೋಪಕರಣಗಳನ್ನು ವೀಕ್ಷಿಸಿದ ಗಣ್ಯರು   

ಹೊಸಪೇಟೆ (ವಿಜಯನಗರ): ನಗರದ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ (ಪಿಡಿಐಟಿ) ಶುಕ್ರವಾರ ಗಣಕ ಯಂತ್ರ ಹಾಗೂ ಎ.ಐ.ಎಂ.ಎಲ್. ವಿಭಾಗಗಳ ಸಹಭಾಗಿತ್ವದಲ್ಲಿ ನೂತನ ’ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ ಲ್ಯಾಬ್ ಆರಂಭಿಸಲಾಯಿತು.

ಹುಬ್ಬಳ್ಳಿಯ ‘ನೆಕ್ಸ್ ಜಿ’ ಕಂಪನಿಯ ಉಪಸಂಸ್ಥಾಪಕ ವಿನಾಯಕ್ ಆರ್.ಡಿ. ಲ್ಯಾಬ್‌ ಉದ್ಘಾಟಿಸಿ, ಬುದ್ಧಿಮತ್ತೆಯುಳ್ಳ ಯಂತ್ರಗಳ ವಿನ್ಯಾಸ ಮತ್ತು ಇದರ ಅಧ್ಯಯನ ಇಂದಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಒಂದು ಯಂತ್ರವು ತನ್ನ ಪರಿಸರವನ್ನು ಗ್ರಹಿಸಿ ತನಗೆ ಕೊಟ್ಟಿರುವ ಗುರಿಯತ್ತ ಸಾಗುತ್ತದೆ. ಅದೆಲ್ಲ ಸಾಧ್ಯವಾಗುತ್ತಿರುವುದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಿಂದ. ಈ ಕ್ಷೇತ್ರ ಭವಿಷ್ಯದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ ಎಂದು ಹೇಳಿದರು.

ಮನಸ್ಸಿನ ಸಾಮರ್ಥ್ಯವನ್ನು ಕೃತಕ ಬುದ್ಧಿಮತ್ತೆಯ ಮೂಲಕ ಸಂಯೋಜಿಸುವ ಮಾನವ ಪ್ರಯತ್ನ ಹೊಸ ಸವಾಲು ಹಾಗೂ ರೋಚಕ ಆವಿಷ್ಕಾರಗಳಿಗೆ ಈ ಪ್ರಯೋಗಾಲಯ ನಾಂದಿ ಹಾಡಲಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೊಸ ಆವಿಷ್ಕಾರ, ಸಂಶೋಧನೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ADVERTISEMENT

ಬೆಂಗಳೂರಿನ ನೆಟಲ್ಲ ಇನ್ನೊವೇಶನ್ಸ್ ಕಂಪನಿಯ ನಿರ್ದೇಶಕ ಎನ್.ಎಸ್. ಬಿರಾದಾರ್ ಮಾತನಾಡಿ, ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತಿನ ಸಹಭಾಗಿತ್ವ, ಅನುದಾನದಲ್ಲಿ ₹17 ಲಕ್ಷದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗೂ ಐ.ಓ.ಟಿ ಲ್ಯಾಬ್ ಸ್ಥಾಪಿಸಲಾಗಿದೆ ಎಂದು ಹೇಳಿದರು.

ಲಕ್ಷ್ಮೇಶ್ವರದ ಅಗಡಿ ತಾಂತ್ರಿಕ ಕಾಲೇಜಿನ ಉಪ ಪ್ರಾಂಶುಪಾಲ ಪರಶುರಾಮ್ ಬಾರ್ಕಿ, ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಚ್.ಎಂ.ಗುರುಸಿದ್ದಸ್ವಾಮಿ, ಪ್ರಾಂಶುಪಾಲ ಎಸ್.ಎಂ.ಶಶಿಧರ್, ಪಿಡಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಪಲ್ಲೇದ್ ದೊಡ್ಡಪ್ಪ, ಉಪ ಪ್ರಾಂಶುಪಾಲ ಯು. ಎಂ. ರೋಹಿತ್, ಯೋಜನೆಯ ಮುಖ್ಯ ಸಂಚಾಲಕ ಪ್ರೊ. ಮಾಲತೇಶ್, ಎ.ಐ.ಎಂ.ಎಲ್. ವಿಭಾಗ ಮುಖ್ಯಸ್ಥೆ ಪ್ರೊ.ವಸಂತಮ್ಮ, ವಿಜಯ ಕುಮಾರ್, ಪ್ರೊ. ಇಂದಿರಾ, ಗಣಕ ಯಂತ್ರ ವಿಭಾಗದ ಮುಖ್ಯಸ್ಥ ಪ್ರೊ. ಪಾರ್ವತಿ ಕಡ್ಲಿ, ಮಂಜುಳಾ ಎಸ್.ಡಿ., ಸಹನಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.