ADVERTISEMENT

ಕೂಡ್ಲಿಗಿ | ಮರವೇರಿ ಕುಳಿತ ಕರಡಿ; ಜನರಿಗೆ ಆತಂಕ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 6:10 IST
Last Updated 7 ಜುಲೈ 2024, 6:10 IST
<div class="paragraphs"><p>ಮರವೇರಿ ಕುಳಿತ ಕರಡಿ</p></div>

ಮರವೇರಿ ಕುಳಿತ ಕರಡಿ

   

ಕೂಡ್ಲಿಗಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಗುಡೇಕೋಟೆ ಹೋಬಳಿಯ ಕುದುರೆಡವು ಗ್ರಾಮದಲ್ಲಿ ಶನಿವಾರ ರಾತ್ರಿ ಕರಡಿಯೊಂದು ಮರವೇರಿ ಕುಳಿತು ಜನರಲ್ಲಿ ಆತಂಕ ಸೃಷ್ಟಿಸಿತು.

ಸಂಜೆ 7.30ರ ಸುಮಾರಿಗೆ ಹಾದಿ ತಪ್ಪಿ ಗ್ರಾಮದೊಳಕ್ಕೆ ಬಂದ ಕರಡಿ, ಜನರನ್ನು ಕಂಡು ಸಮೀಪದಲ್ಲಿದ್ದ ಮರವೇರಿ ಕುಳಿತುಕೊಂಡಿತು. ಕರಡಿ ಮರವೇರಿ ಕುಳಿತ ವಿಷಯ ತಿಳಿದು ಕುದುರೆಡುವು ಗ್ರಾಮದ ಜನರು ಸೇರಿದಂತೆ ಅಕ್ಕ ಪಕ್ಕದ ಗ್ರಾಮದ ಜನರು ಅಲ್ಲಿ ಸೇರಿದ್ದರು. ಇದರಿಂದ ಕರಡಿ ಮರದಲ್ಲಿಯೇ ಕುಳಿತುಕೊಂಡಿತ್ತು.

ADVERTISEMENT

ವಿಷಯ ತಿಳಿದ ಗುಡೇಕೋಟೆ ವಲಯ ಆರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದರು. ಈ ವೇಳೆ ಕರಡಿಯನ್ನು ಸೆರೆ ಹಿಡಿಯುವಂತೆ ಜನರು ಒತ್ತಾಯಿಸಿದರು.

ಆದರೆ ಜನರೆಲ್ಲ ಮಲಗಿದ ಮೇಲೆ ರಾತ್ರಿ ಒಂದು ಗಂಟೆ ಸುಮಾರಿಗೆ ಕರಡಿ ಮರದಿಂದ ಕೆಳಗಿಳಿದು ಕಾಡಿನತ್ತ ಓಡಿ ಹೋಗಿದೆ.

'ಜನರನ್ನು ಕಂಡು ಮರವೇರಿ ಕುಳಿತಿದ್ದ ಕರಡಿ ರಾತ್ರಿ ಜನರಿಲ್ಲದಾಗ ಇಳಿದು ಹೋಗಿದೆ. ಯಾರಿಗೂ ತೊಂದರೆಯಾಗಿಲ್ಲ' ಎಂದು ಗುಡೇಕೋಟೆ ವಲಯ ಅರಣ್ಯಾಧಿಕಾರಿ ಬಿ.ಎಸ್. ಮಂಜುನಾಥ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.