ADVERTISEMENT

ಹೊಸಪೇಟೆ | ನಾಗರ ಪಂಚಮಿ: ನಾಗನ ಬದಲಿಗೆ ಮಕ್ಕಳಿಗೆ ಹಾಲು ವಿತರಣೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2023, 15:38 IST
Last Updated 21 ಆಗಸ್ಟ್ 2023, 15:38 IST
ಮಾನವ ಬಂದುತ್ವ ವೇದಿಕೆ ವತಿಯಿಂದ ಹೊಸಪೇಟೆಯಲ್ಲಿ ಸೋಮವಾರ ಮಕ್ಕಳಿಗೆ ಹಾಲು ವಿತರಿಸಲಾಯಿತು
ಮಾನವ ಬಂದುತ್ವ ವೇದಿಕೆ ವತಿಯಿಂದ ಹೊಸಪೇಟೆಯಲ್ಲಿ ಸೋಮವಾರ ಮಕ್ಕಳಿಗೆ ಹಾಲು ವಿತರಿಸಲಾಯಿತು   

ಹೊಸಪೇಟೆ (ವಿಜಯನಗರ): ಅಜ್ಞಾನ ಅಳಿಯಲಿ, ವಿಜ್ಞಾನ ಬೆಳೆಯಲಿ ಎನ್ನುವ ಘೋಷವಾಕ್ಯಗಳೊಂದಿಗೆ ಸೋಮವಾರ ಇಲ್ಲಿನ ಡಾ.ಬಿ ಆರ್. ಅಂಬೇಡ್ಕರ್ ವೃತ್ತದಲ್ಲಿ ಮಾನವ ಬಂಧುತ್ವ ವೇದಿಕೆ ಕರ್ನಾಟಕ ವತಿಯಿಂದ ನಾಗರ ಪಂಚಮಿಯನ್ನು 'ಬುದ್ಧ ಪಂಚಮಿ" ಎನ್ನುವ ವಿನೂತನ ಕಾರ್ಯಕ್ರಮ ರೂಪಿಸಿ ಆಚರಿಸಲಾಯಿತು.

ಬಡ ಮಕ್ಕಳಿಗೆ ಪವಿತ್ರ ಹಾಲನ್ನು ಕುಡಿಸುವುದರ ಮುಖಾಂತರ ಜನರನ್ನು ಜಾಗೃತಗೊಳಿಸುವ ಕಾರ್ಯಕ್ರಮ ಕೈಗೊಂಡು ಯಶಸ್ವಿಗೊಳಿಸಲಾಯಿತು.

ವಿಜಯನಗರ ಜಿಲ್ಲಾ ಮಾನವ ಬಂದು ವೇದಿಕೆ ಸಂಚಾಲಕ ಸಿ.ಸೋಮಶೇಖರ್ ಬಣ್ಣದಮನೆ, ಜೆ.ಶಿವಕುಮಾರ್, ರಾಮಚಂದ್ರ, ನಿಂಬಗಲ್‌ ರಾಮಕೃಷ್ಣ, ಸಂಜನಾ ಬಣ್ಣದಮನೆ, ಪ್ರತೀಷ, ನಾಗರಾಜ್, ಮಂಜುನಾಥ್, ಖಾಜಹುಸೇನ್, ಅಂಜೀನಿ, ರಾಮಕೃಷ್ಣ, ಹನುಮಂತಪ್ಪ, ಮಂಜುನಾಥ್ ಇತರರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.