ADVERTISEMENT

ಅಯ್ಯಪ್ಪ ಮಾಲೆಯಂತೆ ಪುನೀತ್‌ ರಾಜ್‌ಕುಮಾರ್‌ ಮಾಲೆ ಧರಿಸಲು ಕರೆ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಫೆಬ್ರುವರಿ 2023, 15:07 IST
Last Updated 22 ಫೆಬ್ರುವರಿ 2023, 15:07 IST
   

ಶಬರಿಮಲೆ ಅಯ್ಯಪ್ಪ ಮಾಲೆಯಂತೆ ‘ಅಪ್ಪು ದೇವರ ಮಾಲೆ’ ಧರಿಸಲು ಹೇಳಿರುವ, ‘ಅಪ್ಪು ಹುಡುಗರು, ಡಾ: ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳ ಬಳಗದ‘ ಹೆಸರಿನಲ್ಲಿರುವ ಕರ ಪತ್ರ ಸಾಮಾಜಿಕ ಮಾಧ್ಯಗಳಲ್ಲಿ ಹರಿದಾಡುತ್ತಿದೆ.

ಕರ ಪತ್ರದಲ್ಲಿ ಮಾರ್ಚ್​ 1ರಿಂದ​ 17ರವರೆಗೆ ಮಾಲಾಧಾರಣೆ ವ್ರತ ಆಚರಿಸಲು ಕರೆ ನೀಡಲಾಗಿದೆ. ಈ ಸಂಬಂಧ ಸಿದ್ಧಪಡಿಸಲಾದ ವ್ರತಾಚರಣೆ ನಿಯಮಗಳನ್ನು ಕರ ಪತ್ರದಲ್ಲಿ ಸೂಚಿಸಲಾಗಿದೆ.

ಮಾರ್ಚ್‌.17ರಂದು ಪುನೀತ್‌ ಹುಟ್ಟುಹಬ್ಬ ಇರುವುದರಿಂದ ಈ ವ್ರತಕ್ಕೆ ಕರೆ ನೀಡಲಾಗಿದೆ. ಅಪ್ಪು ಮಾಲೆ ಧರಿಸಿದವರು ಮಾರ್ಚ್​ 18ರಂದು ಪುನೀತ್​ ರಾಜ್​ಕುಮಾರ್​ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ತಮ್ಮ ನೆಚ್ಚಿನ ನಟನಿಗೆ ಗೌರವ ಸಲ್ಲಿಸಬೇಕು ಎಂದು ಕರ ಪತ್ರದಲ್ಲಿ ಹೇಳಲಾಗಿದೆ.

ADVERTISEMENT

‌‘ಅಪ್ಪು ದೇವರ ಮಾಲೆ’ ವ್ರತ ಆಚರಿಸುವವರು ಕೆಲವಷ್ಟು ನಿಯಮಗಳನ್ನು ಪಾಲಿಸಬೇಕು. ಅಪ್ಪು ಚಿತ್ರ ಹೊಂದಿರುವ ಡಾಲರ್​ ಧರಿಸಬೇಕು. ಕೇಸರಿ ಶಾಲು, ಪಂಚೆ, ಶರ್ಟ್​ ಧರಿಸಿ ಅಪ್ಪು ಭಾವಚಿತ್ರವನ್ನಿಟ್ಟು ಪೂಜಿಸಬೇಕು. ಬೆಳಗ್ಗೆ ಸೂರ್ಯ ಹುಟ್ಟುವುದಕ್ಕಿಂತ ಮೊದಲು ಮತ್ತು ಸಂಜೆ ಸೂರ್ಯ ಮುಳುಗಿದ ನಂತರ ಸ್ನಾನ ಮಾಡಬೇಕು ಎಂದು ಕರೆ ಪತ್ರದಲ್ಲಿ ಹೇಳಲಾಗಿದೆ.

ಹೊಸಪೇಟೆಯಲ್ಲಿ ಪುನೀತ್​ ರಾಜ್​ಕುಮಾರ್​ ಪ್ರತಿಮೆ ಇದೆ. ಅಪ್ಪು ಅಭಿಮಾನಿ ಎಂದು ಕರೆದುಕೊಂಡವರಿಂದ ಇದೇ ಊರಿನಲ್ಲಿ ನಟ ದರ್ಶನ್‌ ಮೇಲೆ ಇತ್ತೀಚೆಗೆ ಹಲ್ಲೆಯೂ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.