ADVERTISEMENT

ಶಿಶುಪಾಲನಾ ಕೇಂದ್ರ ನಿರ್ವಹಣೆ: ತರಬೇತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2023, 16:50 IST
Last Updated 7 ಆಗಸ್ಟ್ 2023, 16:50 IST

ಹೊಸಪೇಟೆ (ವಿಜಯನಗರ): ಶಿಶುಪಾಲನಾ ಕೇಂದ್ರಗಳ ಮಹಿಳಾ ಕೇರ್ ಟೇಕರ್ಸ್ ಅವರ ತರಬೇತಿ ಕಾರ್ಯಾಗಾರಕ್ಕೆ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಎಂ.ಚಾಲನೆ ನೀಡಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ‘ನರೇಗಾ ಯೋಜನೆಯಡಿ ಆರಂಭವಾಗುತ್ತಿರುವ ಶಿಶು ಪಾಲನಾ ಕೇಂದ್ರದ ಹೊಸಪೇಟೆ ತಾಲ್ಲೂಕಿನ 14 ಕೇಂದ್ರಗಳು ಹಾಗೂ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ 21 ಗ್ರಾಮ ಪಂಚಾಯಿತಿಗಳಲ್ಲಿ ಆಯ್ಕೆ ಮಾಡಿದ ಮಹಿಳಾ ಕೇರ್ ಟೇಕರ್ಸ್‌ಗಳಿಗೆ ಐದು ದಿನಗಳ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ’ ಎಂದರು.

‘‌ಆ.15ರಿಂದ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಶಿಶು ಪಾಲನಾ ಕೇಂದ್ರ ತೆರೆಯಲಾಗುತ್ತಿದೆ. ಈ ಕೇಂದ್ರಗಳಿಗೆ 3 ತಿಂಗಳಿಗೆ ಇಬ್ಬರಂತೆ ವರ್ಷಕ್ಕೆ 8 ಜನ ಕೇರ್ ಟೇಕರ್ಸ್ ಇರುತ್ತಾರೆ. ಕೇಂದ್ರದ ಮಕ್ಕಳನ್ನು ಅರಿತು ತಾಯಿಯಂತೆ ಆರೈಕೆ ಮಾಡಬೇಕು. ಕಾರ್ಯಾಗಾರದ ಸದುಪಯೋಗ ಪಡೆಯಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಹೊಸಪೇಟೆ ತಾಲ್ಲೂಕಿನ ಸಹಾಯಕ ನಿರ್ದೇಶಕಿ ಶಮಿಮ್ ಬಾನು ಮತ್ತು ಹಗರಿಬೊಮ್ಮನಹಳ್ಳಿ ಸಹಾಯಕ ನಿರ್ದೇಶಕ ರಮೇಶ್ ಮಹಾಲಿಂಗಪುರ, ಸಂಪನ್ಮೂಲ ವ್ಯಕ್ತಿಗಳಾದ ಪಾಜಿಲ್ ಅಹ್ಮದ್, ಜಿಲ್ಲಾ ಐಇಸಿ ಸಂಯೋಜಕಿ ಅಂಬುಜ ಇದ್ದರು.

ಅಂಗಡಿ, ವಾಣಿಜ್ಯ ಸಂಸ್ಥೆಗಳ ನೋಂದಣಿ

ಹೊಸಪೇಟೆ (ವಿಜಯನಗರ): ನಗರದ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ನೋಂದಣಿ ಮಾಡುವುದು ಕಡ್ಡಾಯವಾಗಿದೆ.

ಅಂಗಡಿ ಅಥವಾ ವಾಣಿಜ್ಯ ಸಂಸ್ಥೆಯನ್ನು ಸಂಬಂಧಿತ ತಾಲ್ಲೂಕು ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಂಡ ಸಂಸ್ಥೆಗಳನ್ನು ಹೊರತುಪಡಿಸಿ ನೋಂದಣಿಯಾಗದಿರುವ ಸಂಸ್ಥೆಗಳ ಮಾಲೀಕರು 15 ದಿನಗಳೊಳಗೆ ಕರ್ನಾಟಕ ಸರ್ಕಾರದ ಇ-ಕಾರ್ಮಿಕ ತಂತ್ರಾಂಶದಲ್ಲಿ ನೋಂದಾಯಿಸಬೇಕು ಎಂದು 1ನೇ ವೃತ್ತ ಕಾರ್ಮಿಕ ನಿರೀಕ್ಷಕ ಚೇತನ್ ಕುಮಾರ್ ಹಾಗೂ 2ನೇ ವೃತ್ತ ಕಾರ್ಮಿಕ ನಿರೀಕ್ಷಕ ಅಶೋಕ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯ ಇಂದು

ಹೊಸಪೇಟೆ (ವಿಜಯನಗರ): ನಗರ ವಿಭಾಗದ 110/11 ಕೆವಿ ಸಂಕ್ಲಾಪುರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕೆಲಸ ಮತ್ತು ಇತರೆ ದುರಸ್ತಿ ಕಾರ್ಯ ಹಮ್ಮಿಕೊಂಡಿರುವುದರಿಂದ ಮಂಗಳವಾರ ಬೆಳಿಗ್ಗೆ 10ರಿಂದ  ಮಧ್ಯಾಹ್ನ 2ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀನಿವಾಸ್ ಜಿ.ಜೆ. ತಿಳಿಸಿದ್ದಾರೆ.

11ಕೆವಿ ಫೀಡರ್‌ಗಳಾದ ಎಂಪಿ ಪ್ರಕಾಶ, ಸಂಕ್ಲಾಪುರ, ಎನ್‌ಸಿ ಕಾಲೊನಿ, ಬಸವನ ದುರ್ಗಾ (ಎನ್‌ಜೆವೈ), ಜೆವಿಎಸ್‌ಎಲ್ ಫೀಡರ್ ವ್ಯಾಪ್ತಿಗೆ ಒಳಪಡುವ ಅಂಚಿನಗುಡಿ, ಕೊಂಡನಾಯಕನ ಹಳ್ಳಿ, ಅನಂತಶಯನಗುಡಿ, ಸಂಕ್ಲಾಪುರ ಇಂಡಸ್ಟ್ರಿಯಲ್ ಏರಿಯಾ, ಕರ್ನಾಟಕ ಆಯಿಲ್ ಫ್ಯಾಕ್ಟರಿ ಏರಿಯಾ, ಕಾರಿಗನೂರು, ಎನ್‌ಸಿ ಕಾಲೊನಿ, ಗಾಂಧಿ ಕಾಲೊನಿ, ಗೋಕುಲ ನಗರ, ನಿಶಾನಿ ಕ್ಯಾಂಪ್, ಬಸವನದುರ್ಗಾ, ಹೊಸೂರು, ಬೆಳಗೋಡು ಮತ್ತು ಹಾನಗಲ್ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜುನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.