ADVERTISEMENT

ಹಗರಿಬೊಮ್ಮನಹಳ್ಳಿ: ‘ಜಾನುವಾರುಗಳಿಗೆ ಅಗತ್ಯ ಮೇವು ಸಂಗ್ರಹ’

​ಪ್ರಜಾವಾಣಿ ವಾರ್ತೆ
Published 12 ಮೇ 2024, 15:34 IST
Last Updated 12 ಮೇ 2024, 15:34 IST
ಹಗರಿಬೊಮ್ಮನಹಳ್ಳಿಯಲ್ಲಿ ಸ್ಥಾಪಿಸಿರುವ ಮೇವು ಬ್ಯಾಂಕ್‍ನಲ್ಲಿ ತಹಶೀಲ್ದಾರ್ ಚಂದ್ರಶೇಖರ್ ಶಂಭಣ್ಣ ಗಾಳಿ ಹಾಗೂ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸೂರಪ್ಪ ಪೂಜಾರ್ ಅವರು ರೈತರಿಗೆ ಮೇವು ವಿತರಿಸಿದರು
ಹಗರಿಬೊಮ್ಮನಹಳ್ಳಿಯಲ್ಲಿ ಸ್ಥಾಪಿಸಿರುವ ಮೇವು ಬ್ಯಾಂಕ್‍ನಲ್ಲಿ ತಹಶೀಲ್ದಾರ್ ಚಂದ್ರಶೇಖರ್ ಶಂಭಣ್ಣ ಗಾಳಿ ಹಾಗೂ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸೂರಪ್ಪ ಪೂಜಾರ್ ಅವರು ರೈತರಿಗೆ ಮೇವು ವಿತರಿಸಿದರು   

ಹಗರಿಬೊಮ್ಮನಹಳ್ಳಿ: ‘ತಾಲ್ಲೂಕಿನಲ್ಲಿ ಮೇವು ಬ್ಯಾಂಕ್ ಸ್ಥಾಪಿಸಲಾಗಿದ್ದು, 25 ಟನ್ ಭತ್ತದ ಮೇವು ಸಂಗ್ರಹವಿದೆ’ ಎಂದು ತಹಶೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿ ಹೇಳಿದರು.

ಪಟ್ಟಣದ ಹಳೇ ಊರಿನ ಪಶುವೈದ್ಯಕೀಯ ಇಲಾಖೆಯ ಕಚೇರಿಯ ಆವರಣದಲ್ಲಿ ಗುರುವಾರ ರೈತರಿಗೆ ಮೇವು ವಿತರಿಸಿ ಮಾತನಾಡಿದ ಅವರು, ‘ಜಾನುವಾರು ಹೊಂದಿರುವ ರೈತರಿಗೆ ಪ್ರತಿ ಜಾನುವಾರಿಗೆ ತಿಂಗಳಿಗೆ 25 ಕೆ.ಜಿ ಮೇವು ವಿತರಿಸಲಾಗುವುದು. ಪ್ರತಿ ಕೆ.ಜಿಗೆ ₹2 ಬೆಲೆ ನಿಗದಿ ಮಾಡಲಾಗಿದೆ. ಕಂದಾಯ ಇಲಾಖೆಯಿಂದ ದೃಢೀಕೃತ ದಾಖಲೆಗಳನ್ನು ನೀಡಿ ಮೇವು ಪಡೆಯಬಹುದು’ ಎಂದು ತಿಳಿಸಿದರು.

ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸೂರಪ್ಪ ಪೂಜಾರ್ ಮಾತನಾಡಿ, ‘ತಾಲ್ಲೂಕಿನಲ್ಲಿ 500 ಟನ್ ಮೇವು ಅಗತ್ಯ ಇದೆ. ಮಳೆ ಆರಂಭ ಆಗಿರುವುದರಿಂದ ಹೆಚ್ಚು ಮೇವು ಸಂಗ್ರಹ ಮಾಡಲಾಗುವುದಿಲ್ಲ. ಅಗತ್ಯ ಇದ್ದರೆ ಇಲಾಖೆಯಿಂದ ಖರೀದಿಸಿ ರೈತರಿಗೆ ನೀಡುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ಸಾಗಣೆಗೆ ಅನುಕೂಲಕ್ಕಾಗಿ 25 ಕೆ.ಜಿ.ಯ ಮೇವಿನ ಕಟ್ಟುಗಳನ್ನು ಮಾಡಲಾಗಿದೆ’ ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.