ADVERTISEMENT

ಸರ್ಕಾರಿ ಗೌರವದೊಂದಿಗೆ ಕಾನ್‌ಸ್ಟೆಬಲ್‌ ಗುರುಲಿಂಗಪ್ಪ ಭಜಂತ್ರಿ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 15:33 IST
Last Updated 15 ನವೆಂಬರ್ 2024, 15:33 IST
ಕುರುಗೋಡು ಸಮೀಪದ ಸಿರಿಗೇರಿ ಗ್ರಾಮದ ಮೃತಪೇದೆ ಗುರುಲಿಂಗಪ್ಪ ಭಜಂತ್ರಿ ಅವರ ಮೃತದೇಹದ ಬಳಿ ಪೊಲೀಸರು ಕುಶಾಲತೋಪು ಹಾರಿಸಿ ಗೌರವ ಸಮರ್ಪಿಸಿದರು
ಕುರುಗೋಡು ಸಮೀಪದ ಸಿರಿಗೇರಿ ಗ್ರಾಮದ ಮೃತಪೇದೆ ಗುರುಲಿಂಗಪ್ಪ ಭಜಂತ್ರಿ ಅವರ ಮೃತದೇಹದ ಬಳಿ ಪೊಲೀಸರು ಕುಶಾಲತೋಪು ಹಾರಿಸಿ ಗೌರವ ಸಮರ್ಪಿಸಿದರು   

ಕುರುಗೋಡು: ರಾಮನಗರ ಜಿಲ್ಲಾ ಕೇಂದ್ರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಲ್ಲಿನ ಸಿರಿಗೇರಿ ಗ್ರಾಮದ ಕಾನ್‌ಸ್ಟೆಬಲ್‌ ಗುರುಲಿಂಗಪ್ಪ ಭಜಂತ್ರಿ (31) ಗುರುವಾರ ಮೃತಪಟ್ಟಿದ್ದು, ಶುಕ್ರವಾರ ಹುಟ್ಟೂರು ಸಿರಿಗೇರಿಯಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಯಿತು. 

ಮೃತರ ಗೌರವಾರ್ಥ ಸಿರಿಗೇರಿ ಗ್ರಾಮದಲ್ಲಿ ಪಿಎಸ್‌ಐ ಸದ್ದಾಮ್ ಹುಸೇನ್ ಮತ್ತು ಪೊಲೀಸರು ಮೂರು ಸುತ್ತು ಕುಶಾಲತೋಪು ಹಾರಿಸಿ ಗೌರವ ಸಮರ್ಪಿಸಿದರು.

ಚನ್ನಪಟ್ಟಣದಲ್ಲಿ ಬುಧವಾರ ಜರುಗಿದ ಉಪ ಚುನಾವಣೆಯ ಕರ್ತವ್ಯ ಪೂರ್ಣಗೊಳಿಸಿ ಮನೆಗೆ ತೆರಳಿ ರಾತ್ರಿ ಮಲಗಿದವರು ಮತ್ತೆ ಮೇಲೇಳಲಿಲ್ಲ. ಕುಟುಂಬದವರು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ಮೃತಪಟ್ಟಿರುವ ಬಗ್ಗೆ ವೈದ್ಯರು ಧೃಡಪಡಿಸಿದ್ದಾರೆ.

ADVERTISEMENT

ಮೃತರಿಗೆ ಪತ್ನಿ, ಪುತ್ರ, ತಾಯಿ, ಅಕ್ಕ ಮತ್ತು ತಂಗಿ ಇದ್ದಾರೆ. ಮೃತದೇಹ ಗ್ರಾಮಕ್ಕೆ ಬರುತ್ತಿದ್ದಂತೆ ಕುಟುಂಬದ ಸದಸ್ಯರ ಅಕ್ರಂದನ ಮುಗಿಲುಮುಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.