ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಅಂಕಸಮುದ್ರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 8 ಮತ್ತು 9ನೇ ತರಗತಿಯ 60ವಿದ್ಯಾರ್ಥಿಗಳು ಹಸಿರು ಮನೆ-ಇಕೋಕ್ಲಬ್ ಅಡಿಯಲ್ಲಿ ಶನಿವಾರ ಗ್ರಾಮದ ರೈತರೊಬ್ಬರ ಡ್ರ್ಯಾಗನ್ ಫ್ರೂಟ್ ತೋಟಕ್ಕೆ ಭೇಟಿ ನೀಡಿ, ಕೃಷಿ ಚಟುವಟಿಕೆಗಳನ್ನು ವೀಕ್ಷಿಸಿದರು.
ವಿಜ್ಞಾನ ವಿಷಯ ಶಿಕ್ಷಕಿ ಎಸ್.ಬಿ.ಲಕ್ಷ್ಮೀ ಮಾತನಾಡಿ, ‘ಡ್ರ್ಯಾಗನ್ ಫ್ರೂಟ್‍ನಲ್ಲಿ ಎಲ್ಲ ತರಹದ ಪೌಷ್ಟಿಕಾಂಶಗಳು, ಖನಿಜಾಂಶಗಳು, ವಿಟಮಿನ್‍ಗಳು ದೊರೆಯುತ್ತವೆ. ಮೂಳೆ ಮತ್ತು ಹಲ್ಲುಗಳ ಆರೋಗ್ಯಕ್ಕೆ ಈ ಹಣ್ಣು ಸಹಕಾರಿಯಾಗಿದೆ. ವಿಶೇಷವಾಗಿ ಮೂಳೆಗಳ ಸವಕಲು ತಡೆಯುತ್ತದೆ’ ಎಂದು ತಿಳಿಸಿದರು.
‘ತೋಟದ ಕೊಳವೆಬಾವಿಯಲ್ಲಿ ಕೇವಲ 2 ಇಂಚು ನೀರಿದ್ದು, 4 ಎಕರೆ ಫ್ರೂಟ್ ಬೆಳೆಯಲಾಗಿದೆ. ಈ ತೋಟಗಾರಿಕೆ ಕೃಷಿಗೆ ಕಡಿಮೆ ನೀರು ಸಾಕು. ಉತ್ತಮ ಲಾಭದಾಯಕವಾದ ಮಾರುಕಟ್ಟೆ ಇದೆ’ ಎಂದು ತಿಳಿಸಿದರು.
ಹಣ್ಣು ಜಾಮ್, ಸೋಪು ತಯಾರಿಕೆಗೆ ಹಣ್ಣು ಉಪಯೋಗಿಸಲಾಗುತ್ತದೆ ಎಂದು ರೈತ ಪೆದ್ದರಾಜು ಮಾಹಿತಿ ನೀಡಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಅತಿಥಿ ಶಿಕ್ಷಕ ರಾಘವೇಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.