ADVERTISEMENT

ಹೊಸಪೇಟೆ ತಾಲ್ಲೂಕಿನಲ್ಲಿ ಮಳೆ ಹಾನಿ: ಸತತ 2ನೇ ದಿನವೂ ಬಾರದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 15:35 IST
Last Updated 19 ಅಕ್ಟೋಬರ್ 2024, 15:35 IST
<div class="paragraphs"><p>ಹೊಸಪೇಟೆ ಸುತ್ತಮುತ್ತ ಮಳೆಯಿಂದ ಹಾನಿಗೊಂಡ ಭತ್ತದ ಗದ್ದೆಗಳಿಗೆ ಶನಿವಾರ ತೆರಳಿದ ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ನಾಗರಾಜ್‌ ಅವರು ರೈತರಿಗೆ ಧೈರ್ಯ ತುಂಬಿದರು&nbsp; </p></div>

ಹೊಸಪೇಟೆ ಸುತ್ತಮುತ್ತ ಮಳೆಯಿಂದ ಹಾನಿಗೊಂಡ ಭತ್ತದ ಗದ್ದೆಗಳಿಗೆ ಶನಿವಾರ ತೆರಳಿದ ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ನಾಗರಾಜ್‌ ಅವರು ರೈತರಿಗೆ ಧೈರ್ಯ ತುಂಬಿದರು 

   

–ಪ್ರಜಾವಾಣಿ ಚಿತ್ರ

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ವಿವಿಧೆಡೆ ಭಾರಿ ಗಾಳಿ, ಮಳೆಯಿಂದ ನೂರಾರು ಎಕರೆ ಪ್ರದೇಶಗಳಲ್ಲಿ ಭತ್ತದ ಬೆಳೆ ನಾಶವಾಗಿದ್ದರೂ, ಸತತ ಎರಡನೇ ದಿನವಾದ ಶನಿವಾರ ಸಹ ಯಾವುದೇ ಅಧಿಕಾರಿ ಸ್ಥಳ ಪರಿಶೀಲನೆ ನಡೆಸಿಲ್ಲ ಎಂದು ರೈತಸಂಘದ ನಾಯಕರು ದೂರಿದ್ದಾರೆ.

ADVERTISEMENT

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಟಿ.ನಾಗರಾಜ್‌ ಅವರು ಇತರ ಪದಾಧಿಕಾರಿಗಳೊಂದಿಗೆ ರೈತರ ಹೊಲ, ಗದ್ದೆಗಳಿಗೆ ತೆರಳಿ ಧೈರ್ಯ ರೈತರಿಗೆ ತುಂಬುವ ಕೆಲಸ ಮಾಡಿದರು.

‘ಅಧಿಕಾರಿಗಳು ಪೋನ್ ಕರೆ ಮಾಡಿದಾಗ, ಪೋನ್ ಕರೆ ಸ್ವೀಕರಿಸುತ್ತಿಲ್ಲ. ಕೃಷಿ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿದಾಗ ಒಮ್ಮೆ ಕರೆಯನ್ನು ಸ್ವೀಕರಿಸಿ ಸಿಬ್ಬಂದಿ ಕೊರತೆಯ ಬಗ್ಗೆ ಹೇಳುತ್ತಿದ್ದಾರೆ. ನಿರಂತರ ಮಳೆಯಿಂದಾಗಿ ಹತ್ತಿ, ಈರುಳ್ಳಿ, ಮೆಣಸಿನಕಾಯಿ, ಮೆಕ್ಕೆಜೋಳ, ಸಜ್ಜೆ, ಸೂರ್ಯಕಾಂತಿ, ಇನ್ನಿತರೆ ಬೆಳೆಗಳಿಗೆ ಮಳೆಯಿಂದ ತುಂಬಾ ಹಾನಿಯಾಗಿ’ ಎಂದು ನಾಗರಾಜ್‌ ತಿಳಿಸಿದರು.

‘ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಯವರು ಪರಿಶೀಲನೆ ನಡೆಸಿ ಎಕರೆಗೆ ₹ 50 ಸಾವಿರ ಪರಿಹಾರ ಕೊಡಿಸಬೇಕು’ ಎಂದು ಆಗ್ರಹಿಸಿದರು.

ತಾಲ್ಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ, ಕೆ.ರಾಮಾಂಜಿನಿ, ಜಾಕಿರ್ ಹುಸೇನ್, ಕಲ್ಮಂಗಿ ರಮೇಶ್, ಯಮುನಪ್ಪ, ಹನುಮಂತಪ್ಪ, ನಾರಾಯಣಿ, ಗಂಟೆ ಮಂಜುನಾಥ, ದಾರಾಸಿಂಗ್, ಮಂಜುನಾಥಸಿಂಗ್, ದಂಡಿ ಮಂಜುನಾಥ, ಕಾಸಿನಾಥ ಬಸವನದುರ್ಗ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.