ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 19ನೇ ಗೇಟ್ ನೀರಲ್ಲಿ ಕೊಚ್ಚಿ ಹೋದ ತಕ್ಷಣ ತಾತ್ಕಾಲಿಕ ಗೇಟ್ ಅಳವಡಿಸಲು ಕ್ರಮ ಕೈಗೊಂಡಿದ್ದಕ್ಕೆ 70 ಟಿಎಂಸಿ ಅಡಿ ನೀರು ಉಳಿದಿದೆ, ಇಲ್ಲವಾಗಿದ್ದರೆ 40 ಟಿಎಂಸಿ ಅಡಿ ನೀರು ಮಾತ್ರ ಜಲಾಶಯದಲ್ಲಿ ಇರುತ್ತಿತ್ತು ಎಂದು ಕ್ರಸ್ಟ್ ಗೇಟ್ ತಜ್ಞ ಕನ್ನಯ್ಯ ನಾಯ್ಡು ಹೇಳಿದರು.
ಶನಿವಾರ ಇಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಗೇಟ್ ಗಳ ವಿನ್ಯಾಸ ತರಿಸಿಕೊಳ್ಳುತ್ತಿದ್ದರೆ ಕೆಲಸ ಇನ್ನೂ ಆರಂಭವಾಗುತ್ತಿರಲಿಲ್ಲ, ನಮ್ನ ಬಳಿ ವಿನ್ಯಾಸದ ಬಗ್ಗೆ ನಿಖರ ಮಾಹಿತಿ ಇತ್ತು. ಹೀಗಾಗಿ ಕೆಲವೇ ಗಂಟೆಗಳಲ್ಲಿ ವಿನ್ಯಾಸ ಸಿದ್ಧಗೊಳಿಸಿ ಮೂರು ಕಂಪನಿಗಳಿಂದ ಗೇಟ್ ಸಿದ್ಧಪಡಿಸುವ ಕೆಲಸ ನಡೆಯಿತು, ಸರ್ಕಾರ ಸಿದ್ಧಪಡಿಸಿದ ವಿನ್ಯಾಸ ಈಗಷ್ಟೇ ಕೈಸೇರಿದೆ ಎಂದರು.
ಅಣೆಕಟ್ಟೆಯ ಕ್ರಸ್ಟ್ ಗೇಟ್ ಮಟ್ಟ 1,613 ಅಡಿ. ಅಲ್ಲಿಯವರೆಗೆ ನೀರು ನಿಂತಾಗ ಜಲಾಶಯದಲ್ಲಿ ಸಂಗ್ರಹವಾಗುವುದು 40 ಟಿಎಂಸಿ ಅಡಿ ಮಾತ್ರ. ಧುಮ್ಮಿಕ್ಕುತ್ತಿರುವ ನೀರಿನಲ್ಲೇ ಮೊದಲ ಗೇಟ್ ಎಲಿಮೆಂಟ್ ಇಳಿಸಿದ್ದರಿಂದ 70 ಟಿಎಂಸಿ ಅಡಿ ನೀರು ಉಳಿದಿದೆ ಎಂದರು.ತುಂಗಭದ್ರಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.