ADVERTISEMENT

ಹೂವಿನಹಡಗಲಿ | ಮೆಕ್ಕೆಜೋಳ ತೆನೆ ರಾಶಿಗೆ ಬೆಂಕಿ: ₹6 ಲಕ್ಷ ನಷ್ಟ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 14:44 IST
Last Updated 19 ನವೆಂಬರ್ 2024, 14:44 IST
ಹೂವಿನಹಡಗಲಿ ತಾಲ್ಲೂಕಿನ ಮಿರಾಕೊರನಹಳ್ಳಿ ಬಳಿ ಹೊಲದಲ್ಲಿ ಸಂಗ್ರಹಿಸಿದ್ದ ಮೆಕ್ಕೆಜೋಳ ತೆನೆಗಳ ರಾಶಿ ಸೋಮವಾರ ರಾತ್ರಿ ಬೆಂಕಿಗೆ ಆಹುತಿಯಾಗಿರುವುದು –ಪ್ರಜಾವಾಣಿ ಚಿತ್ರ
ಹೂವಿನಹಡಗಲಿ ತಾಲ್ಲೂಕಿನ ಮಿರಾಕೊರನಹಳ್ಳಿ ಬಳಿ ಹೊಲದಲ್ಲಿ ಸಂಗ್ರಹಿಸಿದ್ದ ಮೆಕ್ಕೆಜೋಳ ತೆನೆಗಳ ರಾಶಿ ಸೋಮವಾರ ರಾತ್ರಿ ಬೆಂಕಿಗೆ ಆಹುತಿಯಾಗಿರುವುದು –ಪ್ರಜಾವಾಣಿ ಚಿತ್ರ   

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಮಿರಾಕೊರನಹಳ್ಳಿ ಬಳಿ ಹೊಲದಲ್ಲಿ ಸಂಗ್ರಹಿಸಿದ್ದ ಮೆಕ್ಕೆಜೋಳ ತೆನೆ ರಾಶಿಗಳಿಗೆ ಸೋಮವಾರ ರಾತ್ರಿ ಬೆಂಕಿ ಬಿದ್ದು ಸಂಪೂರ್ಣ ಭಸ್ಮವಾಗಿದೆ. ₹6 ಲಕ್ಷಕ್ಕೂ ಅಧಿಕ ಮೌಲ್ಯದ ನಷ್ಟ ಸಂಭವಿಸಿದೆ. ಇದು ಕಿಡಿಗೇಡಿಗಳ ಕೃತ್ಯ ಇರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

‘ರೈತ ಎಂ.ಶಿವಕುಮಾರ್ ಅವರಿಗೆ ಸೇರಿದ 9 ಟ್ರ್ಯಾಕ್ಟರ್ ತೆನೆ, ಬಾರಿಕೇರ ಹಾಲೇಶ ಮತ್ತು ಎಚ್.ನಾಗರಾಜ ಅವರಿಗೆ ಸೇರಿದ ತಲಾ 2 ಟ್ರ್ಯಾಕ್ಟರ್ ತೆನೆ ಸುಟ್ಟು ಹೋಗಿದೆ. ಬೆಂಕಿ ನಂದಿಸುವ ವೇಳೆಗೆ ರಾಶಿಗಳು ಭಸ್ಮವಾಗಿದ್ದವು’ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

‘ಬಿತ್ತನೆ, ಬೆಳೆ ನಿರ್ವಹಣೆಗೆ ₹3 ಲಕ್ಷ ಖರ್ಚು ಮಾಡಿರುವೆ. ಇದೀಗ ಫಸಲು ಬೆಂಕಿಗೆ ಆಹುತಿ ಆಗಿದ್ದು, ದಿಕ್ಕೇ ತೋಚುತ್ತಿಲ್ಲ. ಬೆಳೆ ನಂಬಿ ಸಾಲ ಮಾಡಿದ್ದು, ಅದನ್ನು ತೀರಿಸುವುದು ಹೇಗೆಂದು ತಿಳಿಯುತ್ತಿಲ್ಲ’ ಎಂದು ರೈತ ಶಿವಕುಮಾರ್ ಹೇಳಿದರು. ಶಾಸಕ ಕೃಷ್ಣ ನಾಯ್ಕ, ತಹಶೀಲ್ದಾರ್ ಜಿ. ಸಂತೋಷಕುಮಾರ್, ಸಹಾಯಕ ಕೃಷಿ ನಿರ್ದೇಶಕ ಮಹಮ್ಮದ್ ಆಶ್ರಫ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.