ಹರಪನಹಳ್ಳಿ: ತಾಲ್ಲೂಕಿನ ಕೂಲಹಳ್ಳಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಅಸ್ತಿತ್ವಕ್ಕೆ ಬಂದಿದೆ.
ಸಂಘದ ಪ್ರಥಮ ಅಧ್ಯಕ್ಷರಾಗಿ ಎಂ.ಸೋಮನಾಥ, ಉಪಾಧ್ಯಕ್ಷರಾಗಿ ಎಂ.ಮಲ್ಲೇಶ್ ಹಾಗೂ ನಿರ್ದೇಶಕರುಗಳಾಗಿ ಗೌಡ್ರು ಸಣ್ಣತಮ್ಮಪ್ಪ, ಜೆ.ಬಸವರಾಜ್, ಜಗದೀಶ, ಬಣಕಾರ ಮಂಜಣ್ಣ, ಗೋಣಿ ಬಸ್ಯಾನಾಯ್ಕ, ಕೆ.ಹನುಮಂತಪ್ಪ, ಆರ್.ನಂದನ್, ಸಾವಿತ್ರಮ್ಮ ಬಣಕಾರ, ನಾಗೇಶಪ್ಪ ಕಂಚಿಕೇರಿ, ಕಿರಣ್ ವಾಲ್ಮೀಕಿ ಅವರನ್ನು ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಬಿ.ಕೆ.ಬಡಿಗೇರ ಅವರು ಘೋಷಿಸಿದರು.
ಬಳಿಕ ನಡೆದ ಅಭಿನಂದನಾ ಸಮಾರಂಭದಲ್ಲಿ ಕೂಲಹಳ್ಳಿ ಸಂಸ್ಥಾನದ ಚಿನ್ಮಯಿ ಸ್ವಾಮೀಜಿ, ‘ರೈತ ಸ್ನೇಹಿ ಸಹಕಾರ ಸಂಘಗಳಿಂದ ಕೂಲಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ. ಸಹಕಾರ ಸಂಘಗಳಿಂದ ಸಾಲ ಪಡೆಯುವ ಪ್ರತಿಯೊಬ್ಬ ಗ್ರಾಹಕರು ಸಕಾಲಕ್ಕೆ ಸಾಲ ಮರುಪಾವತಿಸಿ ಸಹಕಾರ ಸಂಘವನ್ನು ಬೆಳೆಸಿ’ ಎಂದು ಹೇಳಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗೌರಮ್ಮ, ಸಂಘದ ಈ.ಮದನ್ ಕುಮಾರ, ಗಂಟಿ ಶಿವಕುಮಾರ್ ಮುಖಂಡರಾದ ಕಾನಹಳ್ಳಿ ವಿಶ್ವನಾಥ, ಮಾರ್ತಾಂಡಪ್ಪ, ಬಂಡ್ರಿ ಪ್ರೇಮೇಶ್, ಕಾಳೇಶಪ್ಪ, ಬಸವರಾಜ್ ಈಡಿಗರ, ಹರಾಳ್ ಮೂಗಪ್ಪ, ಎಂ.ಮಂಜುನಾಥ್, ಗೌಡ್ರು ಮಂಜಪ್ಪ, ಕಾಜಾನಾಯ್ಕ, ಯು.ಕುಬೇರಪ್ಪ, ಹೊನ್ನಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.