ADVERTISEMENT

ಹಂಪಿ: ಮಣ್ಣಿನೊಳಗೆ ಹುದುಗಿದ್ದ ಪ್ರಾಚೀನ ಬಾವಿ ಪತ್ತೆ

​ಪ್ರಜಾವಾಣಿ ವಾರ್ತೆ
Published 22 ಮೇ 2024, 13:20 IST
Last Updated 22 ಮೇ 2024, 13:20 IST
<div class="paragraphs"><p> ಬಾವಿ</p></div>

ಬಾವಿ

   

ಹೊಸಪೇಟೆ (ವಿಜಯನಗರ): ಹಂಪಿ ವಿರೂಪಾಕ್ಷ ದೇವಸ್ಥಾನದ ಮುಂಭಾಗದಲ್ಲಿ, ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿದ ಬಾವಿಯೊಂದು ಪತ್ತೆಯಾಗಿದ್ದು, ಬಿರು ಬೇಸಿಗೆಯಲ್ಲಿ ಸಹ ಮೂರು ಅಡಿಯಷ್ಟು ನೀರು ಕೈಗೆ ಸಿಗುವ ಮಟ್ಟದಲ್ಲೇ ಇದೆ.

ವಿರೂಪಾಕ್ಷ ದೇವಸ್ಥಾನದ ಮುಂಭಾಗದಲ್ಲಿ ರಥಬೀದಿ ಇದ್ದು, ಅದರ ಎರಡೂ ಬದಿಗಳಲ್ಲಿ ಸಾಲುಮಂಟಪಗಳಿವೆ. ಈ ಸಾಲುಮಂಟಪಗಳ ಪುನಶ್ಚೇತನ ಕೆಲಸ ನಡೆಯುವ ವೇಳೆ ಈ ಬಾವಿ ಪತ್ತೆಯಾಗಿದೆ.

ADVERTISEMENT

‘ಮಣ್ಣು ತೆಗೆಯುತ್ತಿದ್ದ ಸಮಯದಲ್ಲಿ ಒಂದಿಷ್ಟು ಹಸಿ ಮಣ್ಣು ಕಾಣಿಸಿತು. ಬಿರು ಬೇಸಿಗೆಯಲ್ಲೂ ಮಣ್ಣು ಹಸಿಯಾಗಿರುವುದು ಏಕೆ ಎಂದು ಕುತೂಹಲದಿಂದ ಸ್ವಲ್ಪ ಮಣ್ಣನ್ನು ತೆಗೆದಾಗ ಅಲ್ಲಿ ಬಾವಿ ಇರುವುದು ಗೊತ್ತಾಯಿತು. ಸುತ್ತಮುತ್ತ ಎಲ್ಲೆಡೆ ನೀರಿಗೆ ಹಾಹಾಕಾರ ಇರುವಾಗ ಈ ಬಾವಿಯಲ್ಲಿ ಮೂರು ಅಡಿಯಷ್ಟು ನೀರಿತ್ತು. ಕೆಳಗಡೆ ಚಪ್ಪಡಿ ಹಾಸಲಾಗಿದ್ದು, ಬದಿಯ ಕಲ್ಲಿನ ಸಂದಿಗಳಿಂದಲೇ ನೀರು ಜಿನುಗುವಂತಹ ವ್ಯವಸ್ಥೆಯನ್ನು ಪ್ರಾಚೀನ ಮಂದಿ ಮಾಡಿದ್ದರು. ತುಂಗಭದ್ರಾ ನದಿ ಹರಿಯುತ್ತಿರುವುದು ಎರಡು ಫರ್ಲಾಂಗ್ ದೂರದಲ್ಲಿ, ಅದೂ ಈ ಬಾವಿಗಿಂತ ಕೆಳಮಟ್ಟದಲ್ಲಿ, ಸುತ್ತಮುತ್ತ ಕಲ್ಲಿನ ಬೆಟ್ಟಗಳಿದ್ದರೂ ಇಲ್ಲಿ ಬಿರು ಬೇಸಿಗೆಯಲ್ಲೂ ನೀರು ಜಿನುಗುತ್ತಿರುವುದು ವಿಶೇಷ’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಸಂರಕ್ಷಣಾ ಸಹಾಯಕ ಎಚ್.ರವೀಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ವಿರೂಪಾಕ್ಷ ದೇವಸ್ಥಾನದ ಸುತ್ತಮುತ್ತ ಇಂತಹ ಎಂಟು ಬಾವಿಗಳು ಇರುವ ಬಗ್ಗೆ ಮಾಹಿತಿ ಇದ್ದು, ಇವುಗಳ ಉತ್ಖನನಕ್ಕೆ ಎಎಸ್‌ಐ ಚಿಂತನೆ ನಡೆಸಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.