ಹೊಸಪೇಟೆ (ವಿಜಯನಗರ): ಹಂಪಿಯ ಜನತಾ ಪ್ಲಾಟ್‌ನಲ್ಲಿನ ಹೋಂಸ್ಟೇ ಕುರಿತಂತೆ ಆದೇಶ ನೀಡಿರುವ ಹೈಕೋರ್ಟ್, ಹೋಂಸ್ಟೇಗಳ ಬೀಗ ತೆಗೆಯಿರಿ, ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಿ, ಆದರೆ ಹೊರಗಿನವರಿಗೆ ಅಲ್ಲಿ ತಂಗಲು ಅವಕಾಶ ನೀಡಬೇಡಿ ಎಂದು ಸೂಚಿಸಿದೆ.
ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮತ್ತು ಅರ್ಜಿದಾರರ ಪರ ವಕೀಲರ ವಾದಗಳನ್ನು ಆಲಿಸಿದ ಬಳಿಕ ಕೋರ್ಟ್ ಈ ಆದೇಶ ನೀಡಿದೆ.
ಹೈಕೋರ್ಟ್ ಸೂಚನೆ ಮೇರೆಗೆ ಇದೇ 7ರಂದು ಹಂಪಿಗೆ ಬಂದಿದ್ದ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಸ್ಥಳೀಯರ ಅಹವಾಲು ಆಲಿಸಿದ್ದರು. ಜಿಲ್ಲಾಡಳಿತ ಸಹ ಅವರಿಗೆ ವಸ್ತುಸ್ಥಿತಿ ಮನವರಿಕೆ ಮಾಡಿತ್ತು. ಇದನ್ನು ಅವರು ಹೈಕೋರ್ಟ್‌ಗೆ ವರದಿ ಮಾಡಿದ್ದರು.
ಜನತಾ ಪ್ಲಾಟ್‌ನಲ್ಲಿನ ಅಂಗಡಿಗಳನ್ನು ತೆರೆಯುವುದರ ವಿಚಾರದಲ್ಲಿ ಅರ್ಜಿದಾರರಿಂದಲೂ ವಿರೋಧ ಇರಲಿಲ್ಲ. ಸರ್ಕಾರ ಸಹ ಅದಕ್ಕೆ ಸಹಮತ ವ್ಯಕ್ತಪಡಿಸಿತ್ತು. ವಿವಾದದ ಕೇಂದ್ರಬಿಂದುವಾಗಿದ್ದುದು ಹೋಂಸ್ಟೇ ಮಾತ್ರ. ಹೈಕೋರ್ಟ್ ಇದೀಗ ನೀಡಿರುವ ಆದೇಶವನ್ನು ಸ್ಥಳೀಯರು ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಎಂಬ ಕುತೂಹಲ ನೆಲೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.