ಹೊಸಪೇಟೆ: ಸತತ ಮಳೆಗೆ ವಿಶ್ವಪ್ರಸಿದ್ಧ ಹಂಪಿಯ ನೆಲಸ್ತರ ಶಿವ ದೇವಾಲಯಕ್ಕೆ ಹೊಂದಿಕೊಂಡಿರುವ ಪ್ರಸನ್ನ ವಿರೂಪಾಕ್ಷ ದೇಗುಲದ ಮಂಟಪದ ಗೋಡೆಯ ಕಲ್ಲುಗಳು ಮಂಗಳವಾರ ಕುಸಿದು ಬಿದ್ದಿವೆ.
ಮಂಗಳವಾರ ಸುರಿದ ಭಾರಿ ಮಳೆಗೆ ಇಡೀ ದೇಗುಲ ಜಲಾವೃತಗೊಂಡಿದ್ದು, ಮಂಟಪದ ಕಲ್ಲುಗಳು ಉರುಳಿ ಬಿದ್ದಿವೆ. ಘಟನೆ ನಡೆದಾಗ ಸ್ಥಳದಲ್ಲಿ ಯಾರೂ ಇರಲಿಲ್ಲ.
ದೇವಾಲಯದ ಸುತ್ತ ನೀರು ನಿಂತಿರುವುದರಿಂದ ಪ್ರವಾಸಿಗರು ಒಳಗೆ ಹೋಗದೇ ದೂರದಿಂದಲೇ ಕಣ್ತುಂಬಿಕೊಂಡು ಹೋಗುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.