ADVERTISEMENT

ಹಂಪಿ ಉತ್ಸವ | ಕಣ್ಮನ ಸೆಳೆವ ರಂಗೋಲಿ ಸ್ಪರ್ಧೆ

ಕರಿಬಸವರಾಜ.ಜಿ
Published 4 ಫೆಬ್ರುವರಿ 2024, 6:00 IST
Last Updated 4 ಫೆಬ್ರುವರಿ 2024, 6:00 IST
ಹಂಪಿ ಉತ್ಸವದ ಹಿನ್ನೆಲೆಯಲ್ಲಿ ವಿರೂಪಾಕ್ಷಸ್ವಾಮಿ ರಾಜಗೋಪುರ ಬೀದಿಯಲ್ಲಿ ಹಾಕಿದ್ದ ರಂಗೋಲಿಗಳ ಫೋಟೊ ಕ್ಲಿಕ್ಕಿಸಿಕೊಂಡ ವಿದೇಶಿ ಪ್ರಜೆಗಳು ಖುಷಿಪಟ್ಟರು
ಪ್ರಜಾವಾಣಿ ಚಿತ್ರ/ ಕರಿಬಸವರಾಜ ಜಿ.
ಹಂಪಿ ಉತ್ಸವದ ಹಿನ್ನೆಲೆಯಲ್ಲಿ ವಿರೂಪಾಕ್ಷಸ್ವಾಮಿ ರಾಜಗೋಪುರ ಬೀದಿಯಲ್ಲಿ ಹಾಕಿದ್ದ ರಂಗೋಲಿಗಳ ಫೋಟೊ ಕ್ಲಿಕ್ಕಿಸಿಕೊಂಡ ವಿದೇಶಿ ಪ್ರಜೆಗಳು ಖುಷಿಪಟ್ಟರು ಪ್ರಜಾವಾಣಿ ಚಿತ್ರ/ ಕರಿಬಸವರಾಜ ಜಿ.    

ಹಂಪಿ (ವಿಜಯನಗರ): ಹಂಪಿ ಉತ್ಸವದ ಹಿನ್ನೆಲೆಯಲ್ಲಿ ವಿರೂಪಾಕ್ಷೇಶ್ವರ ದೇಗುಲ ಮುಂಭಾಗದ ರಾಜ ಬೀದಿಯಲ್ಲಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ ನೋಡುಗರ ಕಣ್ಮನ ಸೆಳೆಯಿತು. ಗೋಪುರದ ಮುಂಭಾಗದ ರಸ್ತೆ ವರ್ಣಮಾಯವಾಗಿ ಉತ್ಸವಕ್ಕೆ ಬಂದವರನ್ನು ಸ್ವಾಗತಿಸಿತು.

ಮಹಿಳೆಯರು ದೇವರ ಚಿತ್ರಗಳು, ವಿರೂಪಾಕ್ಷೇಕ್ಷರ ಗೋಪುರ ಸೇರಿ ವಿವಿಧ ,ರಥ, ನಕ್ಷೆ, ನಾನಾ ಬಗೆಯ ಹೂವಿನ ಚಿತ್ರ ಸೇರಿದಂತೆ ನಯನ ಮನೋಹರ ರಂಗೋಲಿಗಳ ಚಿತ್ತಾರ ಹಾಕಿ ಬಣ್ಣತುಂಬಿ, ಹೂಗಳನ್ನಿಟ್ಟು ಅವುಗಳ ಅಂದ ಹೆಚ್ಚಿಸಿದರು. ವಿದೇಶಿಗರು ವಿಶೇಷವಾಗಿ ಅವುಗಳ ಛಾಯಚಿತ್ರ ಕ್ಲಿಕ್ಕಿಸಿ ಸಂಭ್ರಮಿಸಿದರು.

ರಸ್ತೆ ಮೇಲೆ ಅರಳಿದ ರಂಗೋಲಿಗಳ ಚಿತ್ತಾರ ನೋಡಿ ಉತ್ಸವಕ್ಕೆ ಬಂದಿದ್ದ ಪ್ರವಾಸಿಗರು ಸಂತಸಗೊಂಡರು. ವಿದೇಶಿಗರು ಸೇರಿ ಗ್ರಾಮೀಣ ಭಾಗದಿಂದ ಬಂದಂತಹ ಪ್ರವಾಸಿಗರನ್ನು ರಂಗೋಲಿಗಳು ಅಕರ್ಷಿಸಿದವು.

ADVERTISEMENT
ಹಂಪಿ ಉತ್ಸವದ ಹಿನ್ನೆಲೆಯಲ್ಲಿ ವಿರೂಪಾಕ್ಷಸ್ವಾಮಿ ರಾಜಗೋಪುರ ಬೀದಿಯಲ್ಲಿ ಹಾಕಿದ್ದ ರಂಗೋಲಿಗಳನ್ನು ಜನರು ವೀಕ್ಷಿಸಿದರು

ಜಿಲ್ಲಾಧಿಕಾರಿ ಎಂ.ದಿವಾಕರ್ ರಂಗೋಲಿಗಳನ್ನು ವೀಕ್ಷಿಸಿದರು. ಸ್ಪರ್ಧೆಯಲ್ಲಿ 74 ಮಹಿಳೆಯರು ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.