ಹಂಪಿ(ವಿಜಯನಗರ): ಭಕ್ತಿಗೀತೆಯಿಂದ ಕಾರ್ಯಕ್ರಮ ಆರಂಭಿಸುವೆ ಎಂದಾಕ್ಷಣ ನೆರೆದಿದ್ದ ಸಾವಿರಾರು ಜನರ ಕರಾಡತನ, ಖ್ಯಾತ ಹಿನ್ನೆಲೆ ಗಾಯಕ ವಿಜಯಪ್ರಕಾಶ್ ಅವರು ಶುಕ್ರವಾರ ರಾತ್ರಿ 1.30ಕ್ಕೆ ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಜೈ ಹೋ ಮಾರ್ದನಿಸಿತು.
ಪುನೀತ್ ರಾಜಕುಮಾರ್ ಅಭಿನಯದ ಬೊಂಬೆ ಹೇಳುತೈತೆ ಎಂದಾಕ್ಷಣ, ಸಾಗರೋಪಾದಿಯಲ್ಲಿ ಜಮಾವಣೆಗೊಂಡಿದ್ದ ಸಾವಿರಾರು ಸಂಗೀತಾಭಿಮಾನಿಗಳಿಂದ ಹರ್ಷೋದ್ಘಾರ ವ್ಯಕ್ತವಾಯಿತು ಮೊಬೈಲ್ ಟಾರ್ಚ್ ಪ್ರದರ್ಶಿಸಿ ಮೊತ್ತೊಮ್ಮೆ ಅಶ್ರುತರ್ಪಣ ಸಲ್ಲಿಸಿದಂತಿತ್ತು. ನೆಚ್ಚಿನ ಗಾಯಕನಿಗಾಗಿ ಮಧ್ಯರಾತ್ರಿಯೂ ಕದಲದೇ ಆಸನದಲ್ಲಿ ಕುಳಿತಿದ್ದರು. ಶಿವನ ಸ್ತುತಿ ಮಾಡುವಾಗ ಪಾದರಕ್ಷೆಗಳನ್ನು ಕಳಚಿ ಪ್ರಸ್ತುತ
ಪಡಿಸಿದ್ದು ಅವರಿಗೆ ದೈವತ್ವದ ಬಗ್ಗೆ ಇದ್ದ ಗೌರವ ತೋರಿಸಿಕೊಟ್ಟಿತು. ಒಂದೂವರೆ ಗಂಟೆ ವಿವಿಧ ಚಲನಚಿತ್ರ ಗೀತೆಗಳನ್ನು ಹಾಡುವ ಮೂಲಕ ನೆರೆದಿದ್ದವರು ಆಸನಗಳ ಮೇಲೆ ನಿಂತು ಮೆಚ್ಚುಗೆ ಸೂಚಿಸುವಂತೆ ಮಾಡಿದರು, ಪಡ್ಡೆಗಳು ಹುಚ್ಚೆದ್ದು ಕುಣಿದರು.
ಕಾಂತಾರಾ ಚಲನಚಿತ್ರದ‘ಸಿಂಗಾರ ಸಿರಿಯೇ’ ಗೀತೆಯನ್ನು ಅನುರಾಧಾ ಭಟ್ ಅವರೊಂದಿಗೆ ಜೀವತುಂಬಿ ಹಾಡಿದರು. ಗಾಯಕಿ ಅನುರಾಧ ಭಟ್ ಅವರು, ಕೇಳಿಸದೇ ಕಲ್ಲುಕಲ್ಲಿನಲಿ, ಅಪ್ಪ ಅಪ್ಪಾ ಎನ್ನುವ ಗೀತೆಗಳಿಂದ ನೆರೆದಿದ್ದ ಅಭಿಮಾನಿಗಳನ್ನು ಮತ್ತೊಮ್ಮೆ ಹಂಪೆಯ ಕಲ್ಲುಗಳಿಗೆ ಜೀವ ನೀಡಿ, ಅಪ್ಪನ ಪ್ರೀತಿಯ ಕಕ್ಕುಲಾತಿಯನ್ನು ಸಂಗೀತದ ಹರ್ಷಧಾರೆ ಎರೆದರು, ಅಪ್ಪನ ಹಾಡಿಗೆ ಹಲವರ ಕಣ್ಣು ತೇವ ಆಗುವಂತೆ ಹೃದಯ ತುಂಬಿ ಬಂದತ್ತಿತ್ತು.
ಅಜಯ್ ವಾರಿಯರ್ ಅವರು ಹೊಸ ಬೆಳಕು ಮೂಡುತಿದೆ ಗೀತೆಯನ್ನು ಅಭಿನಯದ ಮೂಲಕ ಹಾಡುತ್ತಾ ಪ್ರೇಕ್ಷಕರನ್ನು ರಂಜಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.