ADVERTISEMENT

ಹೈಟೆಕ್ ಬಸ್ ನಿಲ್ದಾಣ, ಅಂಗನವಾಡಿ ಕೇಂದ್ರ ಶೀಘ್ರ: ಶಾಸಕ ಶ್ರೀನಿವಾಸ

​ಪ್ರಜಾವಾಣಿ ವಾರ್ತೆ
Published 7 ಜನವರಿ 2024, 14:25 IST
Last Updated 7 ಜನವರಿ 2024, 14:25 IST
ಕಾನಹೊಸಹಳ್ಳಿ ಸಮೀಪದ ಬಯಲತುಂಬರಗುದ್ದಿ ಗ್ರಾಮದ ದುರಸ್ತಿ ಹಂತದಲ್ಲಿರುವ ಅಂಗನವಾಡಿ ಕೇಂದ್ರವನ್ನು ಶಾಸಕ ಡಾ ಎನ್.ಟಿ. ಶ್ರೀನಿವಾಸ್ ವೀಕ್ಷಿಸಿದರು
ಕಾನಹೊಸಹಳ್ಳಿ ಸಮೀಪದ ಬಯಲತುಂಬರಗುದ್ದಿ ಗ್ರಾಮದ ದುರಸ್ತಿ ಹಂತದಲ್ಲಿರುವ ಅಂಗನವಾಡಿ ಕೇಂದ್ರವನ್ನು ಶಾಸಕ ಡಾ ಎನ್.ಟಿ. ಶ್ರೀನಿವಾಸ್ ವೀಕ್ಷಿಸಿದರು   

ಕಾನಹೊಸಹಳ್ಳಿ: ಸಮೀಪದ ಬಯಲುತುಂಬರಗುದ್ದಿ ಗ್ರಾಮಕ್ಕೆ ಶಾಸಕ ಡಾ.ಎನ್‌.ಟಿ.ಶ್ರೀನಿವಾಸ್ ಅವರು ಭಾನುವಾರ ಭೇಟಿ ನೀಡಿ ಮೂಲ ಸೌಕರ್ಯಗಳ ಪರಿಶೀಲನೆ ನಡೆಸಿದರು.

ದುರಸ್ತಿ ಅಂತದಲ್ಲಿರುವ ಅಂಗನವಾಡಿ ಕೇಂದ್ರ ಪರಿಶೀಲನೆ ನಡೆಸಿದ ಅವರು, ‘ಈಗಾಗಲೇ ಅಂಗನವಾಡಿ ಕೇಂದ್ರ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು. ಗ್ರಾಮೀಣ ಭಾಗದ ಮಕ್ಕಳ ವಿದ್ಯಾಭ್ಯಾಸದ ಹಿತ ದೃಷ್ಟಿಯಿಂದಾಗಿ ಅಂಗನವಾಡಿ, ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಹೆಚ್ಚಿನ‌ ಹೊತ್ತು ನೀಡಲಾಗುವುದು’ ಎಂದರು.

ದುರಸ್ತಿ ಅಂಚಿನಲ್ಲಿರುವ ಬಸ್ ನಿಲ್ದಾಣ ನೋಡಿದ ಅವರು, ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದರು. ಉಪ ಆರೋಗ್ಯ ಕೇಂದ್ರಕ್ಕೆ ಭೇಟಿ‌ ನೀಡಿ ಶೀಘ್ರದಲ್ಲಿಯೇ ನವೀಕರಿಸಲಾಗುವುದು ಎಂದರು.

ADVERTISEMENT

ಮುಖಂಡರಾದ ಮಲ್ಲಿಕಾರ್ಜುನ ಸ್ವಾಮಿ, ಕಾನಹೊಸಹಳ್ಳಿಯ ಸೂರ್ಯಪ್ರಕಾಶ್, ಎಚ್‌.ಬಿ.ಸತೀಶ್, ಕಿರಿಯ ಆರೋಗ್ಯಧಿಕಾರಿ ಎಚ್.ಎಂ. ಕಾಳಮ್ಮ, ಜಿ.ಪ್ರಭಾಕರ್ ಇದ್ದರು‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.