ADVERTISEMENT

ಹೊಸಪೇಟೆ: ವಿಂಟೇಜ್‌ ಕಾರಿಗೆ ಬೆಂಕಿ, ಸಂಪೂರ್ಣ ಭಸ್ಮ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 4:31 IST
Last Updated 17 ನವೆಂಬರ್ 2024, 4:31 IST
<div class="paragraphs"><p>ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿರುವ ವಿಂಟೇಜ್‌ ಕಾರು</p></div>

ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿರುವ ವಿಂಟೇಜ್‌ ಕಾರು

   

ಹೊಸಪೇಟೆ (ವಿಜಯನಗರ): ‘ಎಕ್ಸ್‌ಪ್ಲೋರ್ ಕರ್ನಾಟಕ ಹಿಸ್ಟೋರಿಕ್ ಡ್ರೈವ್‌ 2024’ ಎಂಬ ಹೆಸರಿನಲ್ಲಿ ವಿಂಟೇಜ್‌ ಕಾರುಗಳ ಪ್ರವಾಸದಲ್ಲಿ ತೊಡಗಿದ್ದ ಒಂದು ಕಾರಿಗೆ ನಗರದ ರಾಯರಕೆರೆ ಸಮೀಪ ಭಾನುವಾರ ಬೆಳಿಗ್ಗೆ ಬೆಂಕಿ ಹತ್ತಿಕೊಂಡಿದ್ದು, ಕಾರು ಸಂಪೂರ್ಣ ಭಸ್ಮವಾಗಿದೆ.

ಶನಿವಾರ ಹಂಪಿ, ಅಂಜನಾದ್ರಿ, ತುಂಗಭದ್ರಾ ಅಣೆಕಟ್ಟೆ ಪ್ರದೇಶಗಳಿಗೆಲ್ಲ ತೆರಳಿದ್ದ ಭಾರತದ 20 ಕಾರುಗಳಲ್ಲಿ ಈ ಕಾರು ಸಹ ಸೇರಿತ್ತು. ಭಾನುವಾರ ಬೆಳಿಗ್ಗೆ ಕಮಲಾಪುರದ ಇವಾಲ್ವ್‌ ಬ್ಯಾಕ್‌ ರೆಸಾರ್ಟ್‌ನಲ್ಲಿ ತಂಗಿದ್ದ ಈ ಕಾರುಗಳು ವಿದೇಶದ 20 ಕಾರುಗಳ ಜತೆಗೆ ಚಿಕ್ಕಮಗಳೂರಿನತ್ತ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.

ADVERTISEMENT

ಬಹುತೇಕ ಕಾರುಗಳು ಮುಂದೆಕ್ಕೆ ಚಲಿಸಿದ್ದವು. ಈ ಕಾರು ಹಿಂದುಗಡೆ ಇತ್ತು. ರಾಯರಕೆರೆ ಸಮೀಪಕ್ಕೆ ಬಂದಾಗ ಬೆಳಿಗ್ಗೆ 9 ಗಂಟೆ ವೇಳೆಗೆ ಕಾರಿಗೆ ಒಮ್ಮಿಂದೊಮ್ಮೆಲೆ ಬೆಂಕಿ ಹತ್ತಿಕೊಂಡಿತು. ಕಾರಿನಲ್ಲಿದ್ದವರು ತಕ್ಷಣ ಕಾರು ನಿಲ್ಲಿಸಿ ಇಳಿದ ಕಾರಣ ಅವರಿಗೆ ಏನೂ ಆಗಿಲ್ಲ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು, ಆದರೆ ಆಗಲೇ ಕಾರು ಬಹುತೇಕ ಭಸ್ಮವಾಗಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬೆಂಕಿಗೆ ಆಹುತಿಯಾದ ವಿಂಟೇಜ್‌ ಕಾರು ಭಾನುವಾರ ಬೆಳಿಗ್ಗೆ ಕಮಲಾಪುರದ ಇವಾಲ್ವ್‌ ಬ್ಯಾಕ್‌ ರೆಸಾರ್ಟ್‌ನಲ್ಲಿ ಪ್ರವಾಸ ಹೊರಡುವುದಕ್ಕೆ ಸಜ್ಜಾದಾಗ ಹೀಗಿತ್ತು

ಕಾರಿನ ಮಾಲೀಕರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸ್ಥಳಕ್ಕೆ ಶಾಸಕ ಎಚ್‌.ಆರ್.ಗವಿಯಪ್ಪ ಭೇಟಿ ನೀಡಿ ಪರಿಶೀಲಿಸಿದರು.

ಫೆಡರೇಷನ್ ಆಫ್‌ ಹಿಸ್ಟಾರಿಕ್‌ ವೆಹಿಕಲ್ಸ್ ಆಫ್‌ ಇಂಡಿಯಾ (ಎಫ್‌ಎಚ್‌ವಿಐ) ಸಂಘಟನೆಯು ಬೆಲ್ಜಿಯಂ ಮೂಲದ ಡೆಸ್ಟಿನೇಷನ್‌ ರ‍್ಯಾಲಿ ಸಂಸ್ಥೆಯ ಜತೆಗೂಡಿ ಈ ವಿಂಟೇಜ್‌ ಕಾರುಗಳ ಪ್ರವಾಸ ಹಮ್ಮಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.