ADVERTISEMENT

ಟಿಕೆಟ್ ಸಿಗದಿದ್ದರೆ ಪ್ರಜಾಪ್ರಭುತ್ವಕ್ಕೆ ದ್ರೋಹ: ಜಿ.ಬಿ.ವಿನಯ್ ಕುಮಾರ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2024, 16:03 IST
Last Updated 27 ಫೆಬ್ರುವರಿ 2024, 16:03 IST
ಹರಪನಹಳ್ಳಿ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಜಿ.ಬಿ.ವಿನಯ್ ಕುಮಾರ ಸಭೆ ನಡೆಸಿದರು
ಹರಪನಹಳ್ಳಿ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಜಿ.ಬಿ.ವಿನಯ್ ಕುಮಾರ ಸಭೆ ನಡೆಸಿದರು   

ಹರಪನಹಳ್ಳಿ: ‘ಲೋಕಸಭೆ ಕ್ಷೇತ್ರದಾದ್ಯಂತ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಶ್ರಮಿಸಿರುವ ನನಗೆ ಟಿಕೆಟ್ ಸಿಗದಿದ್ದರೆ ಪ್ರಜಾಪ್ರಭುತ್ವಕ್ಕೆ ದ್ರೋಹವಾಗುತ್ತದೆ’ ಎಂದು ದಾವಣಗೆರೆ ಲೋಕಸಭೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜಿ.ಬಿ.ವಿನಯ್ ಕುಮಾರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ವಿನಯ್ ಕುಮಾರ ನಡಿಗೆ, ಹಳ್ಳಿ ನಡಿಗೆ’ ಪಾದಯಾತ್ರೆ ನಂತರ ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಇಮ್ಮಡಿಯಾಗಿದೆ. ಪಕ್ಷದ ಗ್ಯಾರಂಟಿಗಳಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗಟ್ಟಿಯಾಗಿದೆ. ಆದರೆ ಮನೆಯಿಂದ ಹೊರಗೆ ಬರದಿರುವ ಕೆಲ ನಾಯಕರು, ಈಗ ಚುನಾವಣೆ ಸಮೀಪವಿದ್ದಾಗ ಅಭ್ಯರ್ಥಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತ ಮುಖಂಡ ಹೊಸಳ್ಳಿ‌ ಮಲ್ಲೇಶ್ ಮಾತನಾಡಿ, ‘ಕಳೆದ ಎರಡು ಅವಧಿಯಲ್ಲಿ ಬಿಜೆಪಿ ಪಕ್ಷ ಗೆಲ್ಲಿಸಿ ಇಡೀ ದೇಶ ಆತಂಕದಲ್ಲಿದೆ. ಯುವಕರು ಸಾಮಾಜಿಕ‌ ನ್ಯಾಯ ಪ್ರತಿಪಾದಿಸುವ ರಾಜಕೀಯ ಪಕ್ಷ ಬೆಂಬಲಿಸುವ ಅಗತ್ಯವಿದೆ’ ಎಂದರು.

ಮುಖಂಡರಾದ ರಘು ದೊಡಮನಿ, ಪುರಸಭೆ ಸದಸ್ಯ ಭರತೇಶ, ಮುಖಂಡರಾದ ಮುತ್ತಿಗಿ ಜಂಬಣ್ಣ, ವನಜಾಕ್ಷಿ, ಖುರ್ಷಿದ್ ಅಹ್ಮದ್, ಎಚ್.ಪಿ.ಬಸವರಾಜ, ಬಸವರಾಜ ಹುಲಿಯಪ್ಪನವರ, ಶೇಖರಪ್ಪ ಇತರರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.