ADVERTISEMENT

ಕಾಗಿನೆಲೆ ಪೀಠಕ್ಕೆ ದೇಗುಲ ಕೊಟ್ಟರೆ ಮೆಡಿಕಲ್ ಕಾಲೇಜು ಪ್ರಾರಂಭ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 19:59 IST
Last Updated 19 ಸೆಪ್ಟೆಂಬರ್ 2021, 19:59 IST
ಹೂವಿನಹಡಗಲಿ ತಾಲ್ಲೂಕಿನ ಹ್ಯಾರಡ ಗ್ರಾಮದಲ್ಲಿ ಬೀರಲಿಂಗೇಶ್ವರ ದೇವಸ್ಥಾನ ಭೂಮಿಪೂಜೆ ಕಾರ್ಯಕ್ರಮಕ್ಕೆ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಡೊಳ್ಳು ನುಡಿಸಿ ಚಾಲನೆ ನೀಡಿದರು. ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಹೊಸ್ಕೇರಿ ಬೀರಪ್ಪ,  ಮುಖಂಡರಾದ ಎಂ.ಪರಮೇಶ್ವರಪ್ಪ, ಅಟವಾಳಿಗಿ ಕೊಟ್ರೇಶ, ಟಿ.ಮಹಾಂತೇಶ, ಪಿ.ಬಸಣ್ಣ, ನೀಲಪ್ಪ ಇದ್ದಾರೆ

ಹೂವಿನಹಡಗಲಿ(ವಿಜಯನಗರ ಜಿಲ್ಲೆ): ‘ಮೇಡ್ಲೇರಿ, ಹುಲಿಕಟ್ಟಿ ಮತ್ತು ರಾಣೇಬೆನ್ನೂರಿನ ಬೀರಲಿಂಗೇಶ್ವರ ದೇವಸ್ಥಾನಗಳನ್ನು ಕಾಗಿನೆಲೆ ಪೀಠಕ್ಕೆ ಹಸ್ತಾಂತರಿಸಿದರೆ, ಅದರಿಂದ ಬರುವ ಆದಾಯದಿಂದ ಮೆಡಿಕಲ್‌ ಕಾಲೇಜು ಪ್ರಾರಂಭಿಸಲಾಗುವುದು’ ಎಂದು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹ್ಯಾರಡ ಗ್ರಾಮದಲ್ಲಿ ಭಾನುವಾರ ಬೀರಲಿಂಗೇಶ್ವರ ದೇವಸ್ಥಾನ ನಿರ್ಮಾಣ ಭೂಮಿಪೂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ದೈವದ ನಂಬಿಕೆಯಿಂದ ಭಕ್ತರು ಮೂರೂ ಬೀರಲಿಂಗೇಶ್ವರ ದೇವಸ್ಥಾನಗಳಿಗೆ ಕಾಣಿಕೆ ರೂಪದಲ್ಲಿ ಕೋಟ್ಯಂತರ ರೂಪಾಯಿ ಅರ್ಪಿಸುತ್ತಾರೆ. ಆದರೆ, ಕೆಲವರ ಸ್ವಾರ್ಥದಿಂದ ಹಣ ದುರುಪಯೋಗವಾಗುತ್ತಿದೆ. ಮೂರು ದೇವಸ್ಥಾನಗಳನ್ನು ಕಾಗಿನೆಲೆ ಪೀಠಕ್ಕೆ ಬಿಟ್ಟುಕೊಟ್ಟಲ್ಲಿ ಮೆಡಿಕಲ್ ಕಾಲೇಜು ತೆಗೆಯುತ್ತೇವೆ. ಎಲ್ಲರಿಗೂ ಪ್ರಯೋಜನವಾಗುತ್ತದೆ’ ಎಂದು ತಿಳಿಸಿದರು.

‘ಹಳ್ಳಿಗಳಲ್ಲಿ ದೇವಸ್ಥಾನಗಳಿಗಿಂತ ಉತ್ತಮ ಶಾಲೆಗಳು ನಿರ್ಮಾಣವಾಗಬೇಕಿದೆ. ದೇವಸ್ಥಾನ ಗಂಟೆಗಿಂತ ಶಾಲೆ ಗಂಟೆ ಬಾರಿಸಿದರೆ ಜ್ಞಾನ ಬೆಳೆಯುತ್ತದೆ. ನಮ್ಮ ಧಾರ್ಮಿಕ ಆಚರಣೆಗಳು ಮೌಢ್ಯಕ್ಕೆ ಒಳಗಾಗಬಾರದು. ಮಾಂಸಾಹಾರವನ್ನು ಆಹಾರ ಪದ್ಧತಿಯಾಗಿ ಮಾಡಿಕೊಂಡಿರುವ ಕೆಳಸ್ತರದ ಕುಟುಂಬಗಳು ಆರ್ಥಿಕ ಸಂಕಷ್ಟ ಅನುಭವಿಸುತ್ತಿವೆ. ಪ್ರಾಣಿಬಲಿ, ಕಂದಾಚಾರಗಳನ್ನು ಸಂಪ್ರದಾಯಗಳಾಗಿ ಮುಂದುವರಿಸಬಾರದು’ ಎಂದು ಸಲಹೆ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.