ADVERTISEMENT

ಕಾನಹೊಸಹಳ್ಳಿ | ಮಳೆ: ಬೆಳೆ ಹಾನಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 13:56 IST
Last Updated 16 ನವೆಂಬರ್ 2024, 13:56 IST
ಕಾನಹೊಸಹಳ್ಳಿ ಸಮೀಪದ ಹುಲಿಕೆರೆ ಕೆರೆಯ ಮಳೆ ಹಾನಿ ಪ್ರದೇಶಗಳಿಗೆ ತಹಶೀಲ್ದಾರ್ ರೇಣುಕಮ್ಮ ಭೇಟಿ ನೀಡಿ ಪರಿಶೀಲಿಸಿದರು
ಕಾನಹೊಸಹಳ್ಳಿ ಸಮೀಪದ ಹುಲಿಕೆರೆ ಕೆರೆಯ ಮಳೆ ಹಾನಿ ಪ್ರದೇಶಗಳಿಗೆ ತಹಶೀಲ್ದಾರ್ ರೇಣುಕಮ್ಮ ಭೇಟಿ ನೀಡಿ ಪರಿಶೀಲಿಸಿದರು   

ಕಾನಹೊಸಹಳ್ಳಿ: ಸಮೀಪದ ಹುಲಿಕೆರೆ ಗ್ರಾಮದ ಕೆರೆ ನೀರಿನ ಹಿನ್ನೀರು ಪ್ರದೇಶದಲ್ಲಿ ಹಾನಿಗೊಳಗಾದ ಪ್ರದೇಶಕ್ಕೆ ಶನಿವಾರ ಕೂಡ್ಲಿಗಿ ತಹಶಿಲ್ದಾರ್ ರೇಣುಕಮ್ಮ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೂವತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಕುಟುಂಬದವರಿಗೆ ಸಮಸ್ಯೆ ಆಗಿದೆ. ಇಲ್ಲಿನ ಸಂತ್ರಸ್ತರಿಗೆ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಬೇರೆ ಜಾಗ ಗುರುತಿಸಿ ಅಲ್ಲಿ ನಿವೇಶನ ಕೊಡಬಹುದಾ ಅಥವಾ ನೀರು ಕಡಿಮೆ ಆದಾಗ ತಡೆ ಗೋಡೆ ನಿರ್ಮಾಣ ಮಾಡಬಹುದಾ ಎಂಬುದರ ಕುರಿತು ಚರ್ಚೆ ನಡೆಸಿ ಸೂಕ್ತ ಪರಿಹಾರ ಹೊದಗಿಸಲಾಗುವುದು ಎಂದರು.

ತಾಲ್ಲೂಕು ಪಂಚಾಯತಿ ಇಒ ನರಸಪ್ಪ, ಹಿರೇಕುಂಬಳಗುಂಟೆ ಗ್ರಾಮ ಪಂಚಾಯಿತಿ ಪಿಡಿಒ ನಿಂಗಪ್ಪ, ಕಂದಾಯ ನಿರೀಕ್ಷಕ ಸಿದ್ದಪ್ಪ, ಗ್ರಾಮ ಲೆಕ್ಕಾದಿಕಾರಿ ಇಮ್ರಾನ್, ತಾಲ್ಲೂಕು ಸರ್ವೆಯರ್ ಸಿ.ಎಂ.ಮಂಜುನಾಥ, ಬಿಲ್ ಕಲೆಕ್ಟರ್ ಚಿನ್ನಾಪ್ರಿ, ಗುಂಡುಮುಣುಗು ರುದ್ರೇಶ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.