ADVERTISEMENT

ಕಾನಹೊಸಹಳ್ಳಿ | ತುಂಬಿ ಹರಿದ ಹಳ್ಳ: ಕೊಚ್ಚಿ ಹೋದ ಗೂಡ್ಸ್ ವಾಹನ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 8:42 IST
Last Updated 5 ಅಕ್ಟೋಬರ್ 2024, 8:42 IST
   

ಕಾನಹೊಸಹಳ್ಳಿ (ವಿಜಯನಗರ ಜಿಲ್ಲೆ): ಪಟ್ಟಣ ಸೇರಿದಂತೆ ಹೊಬಳಿ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಉತ್ತಮ ಮಳೆಯಾಗಿದ್ದು ಹಳ್ಳಗಳು ತುಂ‌ಬಿ ಹರಿಯುತ್ತಿವೆ., ಕೆರೆ-ಕಟ್ಟೆಗಳು ಭೆರ್ತಿಯಾಗಿದ್ದು, ಕೆಲವು ಕೋಡಿಬಿದ್ದಿವೆ.

ಸಮೀಪದ ಕೆಂಚಮಲ್ಲನಹಳ್ಳಿ ಬಳಿಯ ಹಳ್ಳದಲ್ಲಿ ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಗೂಡ್ಸ್ ವಾಹನ ನೀರಿನ ರಭಸಕ್ಕೆ ಸಿಕ್ಕಿ ಹಳ್ಳದಲ್ಲಿ ಪಲ್ಟಿಯಾಗಿದೆ, 10 ಕ್ಕೂ ಹೆಚ್ಚು ಜನರಿದ್ದು, ಅದೃಷ್ಟವಾಷತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ವಾಹನ ಪಿಚಾರಟ್ಟಿಯಿಂದ ಕೆಂಚಮಲ್ಲನಹಳ್ಳಿ ಕಡೆ ಹೊರಟ್ಟಿತ್ತು.

ಶನಿವಾರ ಬೆಳಿಗ್ಗೆ ಮಳೆ ಬಿರುಸು ಕಡಿಮೆಯಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.