ADVERTISEMENT

‘ರೈತರು ಎಫ್‌ಐಡಿ ಮಾಡಿಸುವಂತೆ ಜಾಗೃತಿಗೊಳಿಸಿ’

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2023, 13:23 IST
Last Updated 22 ನವೆಂಬರ್ 2023, 13:23 IST
ಕೊಟ್ಟೂರಿನ ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ರೈತರ ಗುರುತಿನ ಚೀಟಿ ಅಭಿಯಾನ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅಮರೀಶ್ ಜಾಲಹಳ್ಳಿ ಮಾತನಾಡಿದರು
ಕೊಟ್ಟೂರಿನ ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ರೈತರ ಗುರುತಿನ ಚೀಟಿ ಅಭಿಯಾನ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅಮರೀಶ್ ಜಾಲಹಳ್ಳಿ ಮಾತನಾಡಿದರು   

ಕೊಟ್ಟೂರು: ಅಗತ್ಯ ದಾಖಲೆಗಳೊಂದಿಗೆ ರೈತರು ಗುರುತಿನ ಚೀಟಿ ಮಾಡಿಸಿಕೊಂಡಲ್ಲಿ ಬರ ಪರಿಹಾರ ಹಣ ಪಡೆಯಲು ಸಾಧ್ಯವಾಗುತ್ತದೆ ಎಂದು ತಹಶೀಲ್ದಾರ್ ಅಮರೀಶ್ ಜಾಲಹಳ್ಳಿ ಹೇಳಿದರು.

ಪಟ್ಟಣದ ಪಟ್ಟಣ ಪಂಚಾಯ್ತಿ ಕಛೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ರೈತರ ಗುರುತಿನ ಚೀಟಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಟ್ಟಣ ಪಂಚಾಯ್ತಿ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ರೈತಾಪಿ ವರ್ಗಕ್ಕೆ ಎಫ್‌ಐಡಿ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದು ಮನವರಿಕೆ ಮಾಡಿಕೊಡಬೇಕು ಎಂದರು.

ADVERTISEMENT

ಪಟ್ಟಣಕ್ಕೆ ಸರಬರಾಜು ಆಗುವ ಕುಡಿಯುವ ನೀರಿನ ಶುದ್ಧೀಕರಣ ಘಟಕ ನಿರ್ಮಾಣಕ್ಕೆ ದೂಪದಹಳ್ಳಿ ಸಮೀಪ ಮೂರು ಎಕರೆ ಭೂಮಿಯನ್ನು ಸರ್ಕಾರ ಮಂಜೂರು ಮಾಡಿದೆ. ಬೀದಿ ನಾಯಿಗಳ ನಿಯಂತ್ರಣ ಹಾಗೂ ಜಾನುವಾರುಗಳಿಗೆ ಮೇವು ಹಾಗೂ ನೀರಿನ ಸೌಲಭ್ಯ ಕಲ್ಪಿಸುವಂತೆ ಸದಸ್ಯರು ಮನವಿ ಮಾಡಿದಾಗ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಪಟ್ಟಣ ಪಂಚಾಯ್ತಿ ಸದಸ್ಯರಾದ ಶಫಿ, ತೋಟದ ರಾಮಣ್ಣ, ಭಾವಿಕಟ್ಟೆ ಶಿವಾನಂದ, ಸಿದ್ಧಯ್ಯ, ಕೆಂಗರಾಜ್, ಮೇಘರಾಜ್,ವಿನಯ್ ಕುಮಾರ್, ವೀಣಾ ವಿವೇಕಾನಂದಗೌಡ, ಮುಖ್ಯಾಧಿಕಾರಿ ಎ.ನಸರುಲ್ಲಾ, ಜಗದೀಶ್, ಪಶು ವೈದ್ಯಾಧಿಕಾರಿ ಡಾ.ಕೆ.ವಿ.ಕೊಟ್ರೇಶ್, ಕಂದಾಯ ನಿರೀಕ್ಷಕ ಎಸ್.ಎಂ.ಹಾಲಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.