ಕೂಡ್ಲಿಗಿ (ವಿಜಯನಗರ ಜಿಲ್ಲೆ): ಜಿಲ್ಲಾಡಳಿತದ ನಿರ್ಬಂಧದ ಮಧ್ಯೆಯೂ ಸಂಡೂರು ತಾಲ್ಲೂಕಿನ ಚಿಕ್ಕಕೆರೆಯಾಗಿನಹಳ್ಳಿ ಸಮೀಪದ ಬೇವಿನಹಳ್ಳಿ ದುರುಗಮ್ಮ ದೇವಿಯ ರಥೋತ್ಸವ ಬುಧವಾರ ಸಂಜೆ ಸಂಭ್ರಮದಿಂದ ನಡೆಯಿತು.
ಆರಂಭದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಪೂಜಾರಿಗಳು ಸದ್ಭಕ್ತರೊಂದಿಗೆ ದೇವಸ್ಥಾನದಿಂದ ರಥದವರೆಗೂ ಹೊತ್ತು ತಂದು, ರಥದ ಸುತ್ತ ಪ್ರದಕ್ಷಿಣೆ ಹಾಕಿ, ರಥದಲ್ಲಿ ಪ್ರತಿಷ್ಠಾಪನೆ ಮಾಡಿದರು. ಈ ವೇಳೆ ಹರಾಜು ಹಾಕಲಾದ ದೇವಿಯ ಪಟವನ್ನು ಕೂಡ್ಲಿಗಿ ಪಟ್ಟಣದ ಜೂಗಲರ್ ಭೀಮಣ್ಣ ₹2,51,501ಕ್ಕೆಪಡೆದುಕೊಂಡರು. ನಂತರ ನೆರೆದಿದ್ದ ಭಕ್ತರು ಜಯಘೋಷದೊಂದಿಗೆ ರಥವನ್ನು ಪಾದಗಟ್ಟೆವರಗೆ ಎಳೆದುಕೊಂಡು ಹೋಗಿ, ಮರಳಿ ಬಂದು ದೇವಸ್ಥಾನದ ಬಳಿ ನಿಲ್ಲಿಸಿದರು.
ಕೂಡ್ಲಿಗಿ, ಸಂಡೂರು, ಹೊಸಪೇಟೆ ತಾಲ್ಲೂಕು ಸೇರಿದಂತೆ ಬೇರೆ ಜಿಲ್ಲೆಗಳಿಂದಲೂ ಬಂದಿದ್ದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.