ಹೊಸಪೇಟೆ (ವಿಜಯನಗರ): ಲಂಬಾಣಿ ಮಹಿಳೆಯರು ಮಾಡಿದ ಕಸೂತಿ ಬಟ್ಟೆಗಳು ಸೋಮವಾರ ಹಂಪಿಯಲ್ಲಿ ಗಿನ್ನೆಸ್ ದಾಖಲೆ ಪುಸ್ತಕ ಸೇರಿದವು.
ಜಿ 20 ಸಭೆಯ ಹಿನ್ನೆಲೆಯಲ್ಲಿ ಹಂಪಿಯ ಎದುರು ಬಸವಣ್ಣ ಮಂಟಪದ ಸಮೀಪ ಸಂಡೂರು ಕಲಾಕೇಂದ್ರ ದ 450 ಮಹಿಳೆಯರು ಸಿದ್ಧಪಡಿಸಿದ 1,755 ಕಸೂತಿಗಳನ್ನು ಪ್ರದರ್ಶನ ಕ್ಕೆ ಇಡಲಾಗಿತ್ತು. ಇದುವರೆಗೆ ಒಂದೇ ಕಡೆ 1000 ಕಸೂತಿಗಳ ಪ್ರದರ್ಶನ ನಡೆದುದು ಗಿನ್ನೆಸ್ ದಾಖಲೆಯಾಗಿತ್ತು. ಇದೀಗ ಆ ದಾಖಲೆ ಮುರಿದ ಕಾರಣ ಗಿನ್ನೆಸ್ ದಾಖಲೆ ಪುಸ್ತಕಕ್ಕೆ ಹಂಪಿಯ ಪ್ರದರ್ಶನ ಸೇರ್ಪಡೆಯಾಯಿತು.
ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರು ಲಂಬಾಣಿ ಮಹಿಳೆಯರ ಜತೆಗೆ ಗಿನ್ನೆಸ್ ಪ್ರಮಾಣಪತ್ರ ಸ್ವೀಕರಿಸಿದರು. ಸಾಂಕೇತಿಕವಾಗಿ 30 ಮಹಿಳೆಯರಷ್ಟೇ ಇಲ್ಲಿಗೆ ಬಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.