ADVERTISEMENT

ಮಾಲವಿ ಡ್ಯಾಂ ಭರ್ತಿ: 150 ಕ್ಯುಸೆಕ್ ನೀರು ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 15:43 IST
Last Updated 26 ಅಕ್ಟೋಬರ್ 2024, 15:43 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮಾಲವಿ ಜಲಾಶಯ ಭರ್ತಿ ಹಿನ್ನೆಲೆ ಕ್ರಸ್ಟ್‌ಗೇಟ್ ಮೂಲಕ ನೀರು ಹೊರ ಬಿಡಲಾಯಿತು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮಾಲವಿ ಜಲಾಶಯ ಭರ್ತಿ ಹಿನ್ನೆಲೆ ಕ್ರಸ್ಟ್‌ಗೇಟ್ ಮೂಲಕ ನೀರು ಹೊರ ಬಿಡಲಾಯಿತು   

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಮಾಲವಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಭಾನುವಾರ ಕ್ರಸ್ಟ್ ಗೇಟ್-2 ಮೂಲಕ 150 ಕ್ಯುಸೆಕ್ ನೀರು ಹೊರ ಬಿಡಲಾಯಿತು.

‘ಒಳಹರಿವು ಪ್ರಮಾಣ ನೋಡಿಕೊಂಡು, ಜಲಾಶಯದಲ್ಲಿನ ಸಂಗ್ರಹ ಸಾಮರ್ಥ್ಯ ಪರಿಶೀಲಿಸಿದ ನಂತರ ಹೊರ ಹರಿವು ನಿಲ್ಲಿಸಲಾಗುವುದು’ ಎಂದು ಜಲಾಶಯದ ಸಹಾಯಕ ಎಂಜನಿಯರ್ ಹುಲಿರಾಜ್ ಮಾಹಿತಿ ನೀಡಿದರು.

‘ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಿಂದಾಗಿ 2022ರಲ್ಲಿ ಜಲಾಶಯ ಭರ್ತಿಯಾಗಿತ್ತು. ಈಗ ಮತ್ತೆ ಭರ್ತಿಯಾಗಿದೆ. ಆದರೆ ಕ್ರಸ್ಟ್‌ಗೇಟ್‍ಗಳು ದುರಸ್ತಿಯಾಗದೇ ಇರುವುದು, ನೀರು ಅನಗತ್ಯವಾಗಿ ಪೋಲಾಗುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.