ADVERTISEMENT

ಪೈಗಂಬರರ ಕುರಿತು ಅವಹೇಳನ: ಹೊಸಪೇಟೆಯಲ್ಲಿ ಮುಸ್ಲಿಮರಿಂದ ಬೃಹತ್ ಪ್ರತಿಭಟನೆ

ಹೊಸಪೇಟೆಯಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 10:03 IST
Last Updated 26 ಅಕ್ಟೋಬರ್ 2024, 10:03 IST
<div class="paragraphs"><p>ಹೊಸಪೇಟೆಯಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.</p></div>

ಹೊಸಪೇಟೆಯಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

   

ಹೊಸಪೇಟೆ (ವಿಜಯನಗರ): ಪ್ರವಾದಿ ಮುಹಮ್ಮದ್ ಪೈಗಂಬರರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾದ ಉತ್ತರ ಪ್ರದೇಶದ ನರಸಿಂಹಾನಂದ ಸರಸ್ವತಿ ಸ್ವಾಮೀಜಿ ಮತ್ತು ರಾಮಗಿರಿ ಸ್ವಾಮೀಜಿ ಅವರ ಹೇಳಿಕೆ ಖಂಡಿಸಿ ಹಾಗೂ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹೊಸಪೇಟೆಯಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಜೆಪ್ನೆ ಈದ್‌ ಮಿಲಾದುನ್ನಬಿ ಕಮಿಟಿಯ ನೇತೃತ್ವದಲ್ಲಿ ಬೀದಿಗಿಳಿದ ಸಾವಿರಾರು ಮಂದಿ ಈ ಇಬ್ಬರ ವಿರುದ್ಧ ಘೋಷಣೆ ಕೂಗಿದರು ಹಾಗೂ ಕಠಿಣ ಕ್ರಮಕ್ಕೆ ಒತ್ತಾಯಿಸಿದರು. ‘ನಮ್ಮ ಪ್ರವಾದಿಗಾಗಿ ನಾವು ಜೀವ ಕೊಡಲು ಸಿದ್ಧ’, ‘ನಮ್ಮ ಪೈಗಂಬರ್‌ ಅವರ ಅವಮಾನ ಸಹಿಸಲ್ಲ...’ ಮೊದಲಾದ ಭಿತ್ತಿಫಲಕವನ್ನು ಪ್ರತಿಭಟನಕಾರರು ಹಿಡಿದುಕೊಂಡಿದ್ದರು.

ADVERTISEMENT

ಈದ್ಗಾ ಮೈದಾನದಿಂದ ಆರಂಭವಾದ ಮೆರವಣಿಗೆ ಬಸ್‌ ನಿಲ್ದಾಣ, ಪುನೀತ್ ರಾಜ್‌ಕುಮಾರ್ ವೃತ್ತ ಮೂಲಕ ತಾಲ್ಲೂಕು ಕಚೇರಿಗೆ ಬಂತು, ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಸ್ಥಳೀಯ ಮಸೀದಿಯ ಮುಖ್ಯ ಗುರು ಅಬೂಬಕರ್‌ ಸಿದ್ದೀಕ್‌ ಸಖಾಫಿ ಸಹಿತ ಹಲವು ಮುಖಂಡರು ಪಾಲ್ಗೊಂಡಿದ್ದರು.

ಪೊಲೀಸ್ ಭದ್ರತೆ: ಇದೇ ವಿಚಾರದಲ್ಲಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಈಗಾಗಲೇ ಪ್ರತಿಭಟನೆಗಳು ನಡೆದಿದ್ದು, ನಗರದಲ್ಲಿ ಕೊನೆಯ ಹಂತದಲ್ಲಿ ಪ್ರತಿಭಟನೆ ನಡೆದಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತೆ ವಹಿಸಿದ್ದರು. ಜಿಲ್ಲೆಯ ವಿವಿಧ ಭಾಗಗಳಿಂದ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಳ್ಳಲಾಗಿತ್ತು. ಪುನೀತ್‌ ರಾಜ್‌ಕುಮಾರ್ ವೃತ್ತದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ವಾಹನ ಸಂಚಾರವನ್ನು ಸಂಫೂರ್ಣ ನಿರ್ಬಂಧಿಸಲಾಗಿತ್ತು. ಸ್ವತಃ ಎಸ್‌ಪಿ ಶ್ರೀಹರಿಬಾಬು ಬಿ.ಎಲ್‌.ಅವರೇ ನಗರ ಠಾಣೆಯಲ್ಲಿ ಮೊಕ್ಕಾಂ ಹೂಡಿ, ಶಾಂತಿಯುತವಾಗಿ ಪ್ರತಿಭಟನಾ ಮೆರವಣಿಗೆ ನಡೆಯುವುದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.